ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನನ್ನು ಮಾಜಿ ನಗರಸಭೆ ಸದಸ್ಯರಾದ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಮಂಗಳವಾರ ನಡೆದಿದೆ.
ಯುವಕನನ್ನು ನಾಗರಾಜ್ ಆಚಾರ್ಯ (26 ) ಎಂದು ಗುರುತಿಸಲಾಗಿದೆ.ಈತ 80 ಬಡಗುಬೆಟ್ಟು ಪರ್ಕಳದ ನಿವಾಸಿಯಾಗಿದ್ದು
ಆನಂದ ಆಚಾರ್ಯ ಎಂಬವರ ಮಗನಾಗಿದ್ದಾನೆ. ಸಂಬಂಧಿಕರು ತುರ್ತಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
Kshetra Samachara
17/08/2021 06:54 pm