ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಾಣವನ್ನೇ ಪಣವಾಗಿಟ್ಟು ಬೆಕ್ಕಿನ ಮರಿಯನ್ನು ರಕ್ಷಿಸಿದ ಮಹಿಳೆ

ಮಂಗಳೂರು: ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಪಾಳು ಬಾವಿಗೆ ಇಳಿದ ಮಹಿಳೆಯೋರ್ವರು ಬೆಕ್ಕಿನ ಮರಿಯೊಂದನ್ನು ರಕ್ಷಿಸಿದ್ದಾರೆ.

ನಗರದ ಜೆಪ್ಪು ಬಳಿಯ ಸಂದೀಪ್ ಎಂಬವರ ಮನೆಯ ಬಳಿಯಲ್ಲಿದ್ದ ಪಾಳು ಬಾವಿಗೆ ಬೆಕ್ಕಿನ ಮರಿಯೊಂದು ಬಿದ್ದಿದ್ದು, ಮೇಲೆ ಬರಲಾಗದೆ ಕಲ್ಲೊಂದನ್ನು ಆಶ್ರಯಿಸಿ ಕುಳಿತಿತ್ತು‌. ಈ ಬಗ್ಗೆ ಪ್ರಾಣಿ ಪ್ರಿಯೆ ರಜನಿ ಶೆಟ್ಟಿಯವರಿಗೆ ಸಂದೀಪ್ ಅವರು ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಢಾಯಿಸಿದ ಅವರು ಸೊಂಟಕ್ಕೆ ಹಗ್ಗ ಬಿಗಿದು ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ‌.

ರಜನಿ ಶೆಟ್ಟಿಯವರು ಈ ಹಿಂದೆಯೂ ಎರಡು ಮೂರು ಬಾರಿ ಇದೇ ರೀತಿ ಬಾವಿಗೆ ಬಿದ್ದಿದ್ದ ಬೆಕ್ಕು, ನಾಯಿಗಳನ್ನು ರಕ್ಷಿಸಿದ್ದಾರೆ. ಶ್ವಾನ ಪ್ರಿಯೆಯಾಗಿರುವ ಇವರ ಮನೆಯಲ್ಲಿ 40 ಕ್ಕಿಂತಲೂ ಅಧಿಕ ನಾಯಿಗಳಿವೆ. ಅಲ್ಲದೆ ದಿನವೂ ಸಾಕಷ್ಟು ಬೀದಿ ನಾಯಿಗಳಿಗೆ ಅನ್ನ ನೀಡುತ್ತಾರೆ.

Edited By : Shivu K
Kshetra Samachara

Kshetra Samachara

09/08/2021 10:59 am

Cinque Terre

22.94 K

Cinque Terre

8

ಸಂಬಂಧಿತ ಸುದ್ದಿ