ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕರಾವಳಿಯ ವಿವಿಧಡೆ ಆಟಿ ಅಮಾವಾಸ್ಯೆ ಸಮುದ್ರ ಸ್ನಾನ ಸಂಪನ್ನ

ಬ್ರಹ್ಮಾವರ: ಆಟಿ ಅಮಾವಾಸ್ಯೆಯಂದು ಕರಾವಳಿ ಭಾಗದಲ್ಲಿ ಸಮುದ್ರ ಸ್ನಾನ ಧಾರ್ಮಿಕ ನಂಬಿಕೆಯೊಂದಿಗೆ ಅತ್ಯಂತ ವಿಶೇಷತೆಯನ್ನು ಪಡೆದಿದೆ.

ಈ ದಿನ ಸಮುದ್ರ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತದೆ ಹಾಗೂ ಸಮುದ್ರ ಸ್ನಾನ ಮಾಡಿ ಮರಳಿನಲ್ಲಿ ಅಪರಕ್ರೀಯೆಗಳನ್ನು ನಡೆಸುವುದರರಿಂದ ಅಗಲಿದ ಹಿರಿಯರಿಗೆ ಸದ್ಗತಿ ದೊರೆಯುತ್ತದೆ ಎನ್ನುವುದು ನಂಬಿಕೆ. ಹೀಗಾಗಿ ಸಾವಿರಾರು ಸಂಖ್ಯೆಯ ಅಸ್ಥಿಕರು ಸಮುದ್ರ ಸ್ನಾನ ಮಾಡಿ ಅಪರ ಕ್ರೀಯೆಗಳನ್ನು ನಡೆಸುತ್ತಾರೆ.

ಈ ಬಾರಿ ಕೂಡ ಕೋಟ, ಸಾಸ್ತಾನ, ಕುಂದಾಪುರ, ಮರವಂತೆ ಮುಂತಾದ ಕಡೆಗಳಲ್ಲಿ ಸಮುದ್ರ ಸ್ನಾನ ನೆರವೇರಿತು. ಕೊರೊನಾ ಕಾರಣದಿಂದ ಅದ್ದೂರಿ ಆಚರಣೆಗಳಿಗೆ ಕಡಿವಾಣ ಹಾಕಲಾಗಿತ್ತು ಹಾಗೂ ಮರವಂತೆ ಮುಂತಾದ ಕಡೆ ಆಟಿ ಜಾತ್ರೆ ಕೂಡ ನಡೆಯಲಿಲ್ಲ.

ಸಮುದ್ರ ಸ್ನಾನದಿಂದ ಚರ್ಮರೋಗಗಳು ನಿವಾರಣೆಯಾಗುತ್ತದೆ ಹಾಗೂ ಆರೋಗ್ಯಕ್ಕೆ ಉತ್ತಮ ಎನ್ನುವ ವೈಜ್ಞಾನಿಕ ಹಿನ್ನಲೆ ಕೂಡ ಇದೆ.

Edited By : Shivu K
Kshetra Samachara

Kshetra Samachara

08/08/2021 08:18 pm

Cinque Terre

16.22 K

Cinque Terre

0