ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅನಾರೋಗ್ಯದಿಂದ ದಾರುಣ ಸ್ಥಿತಿಯಲ್ಲಿರುವ ಯಕ್ಷಗುರುವಿಗೆ ಆರ್ಥಿಕ ನೆರವಿನ ಅಗತ್ಯವಿದೆ; ಕೈಜೋಡಿಸೋಣ ಬನ್ನಿ

ಮಂಗಳೂರು: ಕರಾವಳಿಯ ಯಕ್ಷಗಾನ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಿದ ಪ್ರಾಜ್ಞಗುರು, ಛಾಂದಸ ಪ್ರತಿಭೆ, ಗಣೇಶ ಕೊಲೆಕಾಡಿಯವರು ಹಾಗೂ ಅವರ ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ತೀವ್ರ ಹದಗೆಡುತ್ತಿದ್ದು, ಔಷಧಿಗಾಗಿ ದಿನದ ಖರ್ಚನ್ನೂ ಮಾಡಲಾಗದಷ್ಟು ಆರ್ಥಿಕವಾಗಿ ಸೋತಿದ್ದಾರೆ. ಸದ್ಯ ಕೊಲೆಕಾಡಿಯವರ ದೇಹ ಸ್ಥಿತಿಯು 3-4 ತಿಂಗಳಿನಿಂದ ಮತ್ತಷ್ಟು ಕ್ಷೀಣಿಸಿದ್ದು, ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದ್ದಾರೆ‌. ಅವರ ವೈದ್ಯಕೀಯ ವೆಚ್ಚ, ಮನೆಯ ಖರ್ಚು ಸೇರಿ ತಿಂಗಳಿಗೆ 40 ಸಾವಿರ ರೂ. ಅಗತ್ಯವಿದ್ದು, ಯಾವುದೇ ಆದಾಯ ಮೂಲ ಇಲ್ಲದಿರುವುದರಿಂದ ದಾನಿಗಳ ನೆರವಿನ‌ ನಿರೀಕ್ಷೆಯಲ್ಲಿದ್ದಾರೆ.

ಹಿಂದೊಮ್ಮೆ ಮುಂಬೈಗೆ ತೆರಳಿದ್ದಾಗ ದುಷ್ಕರ್ಮಿಗಳ ದಾಳಿಗೊಳಗಾಗಿ ತಮ್ಮ ಎರಡೂ ಕಾಲುಗಳು, ಎರಡೂ ಕೈಗಳ ಸ್ವಾಧೀನ ಕಳೆದುಕೊಂಡು ಸ್ವತಂತ್ರವಾಗಿ ನಡೆಯಲಾಗದ ಸ್ಥಿತಿಯಲ್ಲಿ ಮಲಗಿದ್ದಲ್ಲಿಯೇ ಇದ್ದಾರೆ. ಇದೇ ಸಂದರ್ಭ ತಲೆಗೂ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಯಾವೊಂದು ಉದ್ಯೋಗವನ್ನೂ ಮಾಡಲಾಗದೆ ಬೇರಾವ ಆದಾಯ ಮೂಲವೂ ಇಲ್ಲದೆ, ಮನೆಯಲ್ಲಿ ದುಡಿಯುವವರೂ ಇಲ್ಲದೆ ಅತ್ಯಂತ ಶೋಚನೀಯವಾಗಿ ದಿನದೂಡುತ್ತಿದ್ದಾರೆ. ಆಶ್ರಯಕ್ಕಾಗಿ ಉಡುಪಿಯ ಯಕ್ಷಗಾನ ಕಲಾರಂಗವು ಮನೆಯೊಂದನ್ನು ಕಟ್ಟಿಕೊಟ್ಟಿತ್ತು. ಕೆಲವರ್ಷಗಳಿಂದ ದಿನದ ಒಪ್ಪೊತ್ತಿನ ಊಟಕ್ಕೂ ಅಸಾಧ್ಯವಾದಾಗ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇಗುಲವು ದಿನನಿತ್ಯದ ಊಟಕ್ಕಾಗಿ ಆರ್ಥಿಕವಾದ ನೆರವು ನೀಡುತ್ತಿದೆ.

ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಯಾರಲ್ಲೂ ಕೈಚಾಚದ ಕೊಲೆಕಾಡಿಯವರು ಇಂದು ಅಸಹಾಯಕರಾಗಿದ್ದಾರೆ. ಅವರ ವೈದ್ಯಕೀಯ ವೆಚ್ಚವೇ ಇಲ್ಲಿಯವರೆಗೆ 70 ಲಕ್ಷ ರೂ‌. ವರೆಗೆ ಆಗಿದ್ದು, ಬಹಳಷ್ಟು ದಾನಿಗಳು ಅವರಿಗೆ ಸಹಕರಿಸಿದ್ದಾರೆ‌. ಇದೀಗ ನಾಲ್ಕೈದು ತಿಂಗಳಲ್ಲಿ ಮತ್ತೆ ಅನಾರೋಗ್ಯ ಕಾಡುತ್ತಿದ್ದು, ಈಗಿನ ದುಸ್ಥಿತಿಯಲ್ಲಿ ಧ್ವನಿಯೂ ಕ್ಷೀಣವಾಗಿ ಮಾತನಾಡಲೂ ಕಷ್ಟಪಡುವಂತಹ ಸ್ಥಿತಿ ಒದಗಿದೆ. ಆದ್ದರಿಂದ ದಾನಿಗಳು ಅವರ ನೆರವಿಗೆ ಧಾವಿಸಬೇಕಾಗಿದೆ.

ಗೂಗಲ್ ಪೇ ಫೋನ್ ನಂಬರ್

Ganesh kolekadi- 9482130381

State bank of India

Karnad - Mulky

A/c no.20303905203

IFSlC : SBIN0007904

Edited By : Nagesh Gaonkar
Kshetra Samachara

Kshetra Samachara

05/08/2021 06:29 pm

Cinque Terre

29.82 K

Cinque Terre

0

ಸಂಬಂಧಿತ ಸುದ್ದಿ