ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಚಿತ್ರಾಪು ಘಜನಿ ಬಳಿ ಅವಘಡದಿಂದ ಗಾಯಗೊಂಡು ಗದ್ದೆಯಲ್ಲಿ ಬಿದ್ದಿದ್ದ ಗಂಡು ನವಿಲನ್ನು ಸ್ಥಳೀಯ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯ ನಿತೇಶ್ ಮತ್ತು ಮತ್ತಿತರರು ಸೇರಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮುಲ್ಕಿ ನ. ಪಂ. ವ್ಯಾಪ್ತಿಯ ಚಿತ್ರಾಪು ಘಜನಿಯ ಗ್ರಾಮೀಣ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನವಿಲಿನ ಗುಂಪು ಕಾಣಸಿಗುತ್ತಿದ್ದು ನವಿಲು ನರ್ತನ ಸ್ಥಳೀಯರ ಮನ ಗೆದ್ದಿತ್ತು. ಬುಧವಾರ ಸಂಜೆ ನವಿಲಿನ ಗುಂಪಿನಲ್ಲಿದ್ದ ಗಂಡು ನವಿಲು ಅವಘಡದಿಂದ ಕಾಲಿಗೆ ಗಂಭೀರ ಗಾಯಗಳಾಗಿ ಗದ್ದೆಯಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯ ಯುವಕ ನಿತೇಶ್ ಮತ್ತಿತರರು ಕಾರ್ಯಪ್ರವೃತ್ತರಾಗಿ ಕಾಲಿಗೆ ಬಟ್ಟೆ ಕಟ್ಟಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬಳಿಕ ಕಿನ್ನಿಗೋಳಿಯ ಅರಣ್ಯ ಇಲಾಖೆಯ ಅಧಿಕಾರಿ ಸಂತೋಷ್ ರವರಿಗೆ ಮಾಹಿತಿ ನೀಡಿ ಹಸ್ತಾಂತರಿಸಿದ್ದಾರೆ.
ಯುವಕನ ಮಾನವೀಯತೆಯ ಗುಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಅಭಿನಂದನೆ ವ್ಯಕ್ತವಾಗಿದೆ
Kshetra Samachara
04/08/2021 08:15 pm