ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು : ಲಾಕ್ ಡೌನ್ ಸದುಪಯೋಗ ವನಮಹೋತ್ಸಕ್ಕೆ ಸಿದ್ದರಾಗುತ್ತಿರುವ ವಿಜಯ ಯುವ ಸಂಗಮ

ಮುಲ್ಕಿ : ಲಾಕ್ ಡೌನ್ ಸಂದರ್ಭ ವ್ಯವಹಾರ ತಿರುಗಾಟ ಎಲ್ಲವನ್ನೂ ನಿಲ್ಲಿಸಿ ಸುಮ್ಮನಿರಬೇಕಾದ ಈ ಸಂದರ್ಭದಲ್ಲಿ ಎಕ್ಕಾರಿನ ಯುವಕರ ಗುಂಪು ಮುಂದಿನ ಮಳೆಗಾಲದಲ್ಲಿ ನಡೆಯುವ ವನಮಹೋತ್ಸವಕ್ಕೆ ಗಿಡ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡು ಸಮಯದ ಸದುಪಯೋಗದಲ್ಲಿ ತೊಡಗಿಕೊಂಡಿದೆ.

ಎಕ್ಕಾರಿನ ವಿಜಯ ಯುವ ಸಂಗಮಕ್ಕೆ ಇಪ್ಪತ್ತೈದರ ಸಂಭ್ರಮ. ಹಾಗಾಗಿ ಇಪ್ಪತ್ತೈದು ವಿಶಿಷ್ಟ ಬಗೆಯ ಹೊಸ ಚಿಂತನೆಯ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಯೋಚನೆಯ ಫಲವಾಗಿ ಹುಟ್ಟಿಕೊಂಡದ್ದು ವನಮಹೋತ್ಸವಕ್ಕೆ ಗಿಡಗಳ ಸಿದ್ದತೆ.

ಇದಕ್ಕಾಗಿ ಊರವರಿಂದ ಪರಿಚಯಸ್ಥರಿಂದ ಮಾವಿನ ಗೊರಟು. ಹಲಸಿನ ಬೀಜ. ಪುನರ್ಪುಳಿ ಬೀಜ. ಪಪ್ಪಾಯಿ. ನೇರಳೆಹಣ್ಣಿನ ಬೀಜ ಹೀಗೆ ಸಂಗ್ರಹಿಸುವ ಕಾರ್ಯ ಆರಂಭ.

ಸಂಪಿಗೆ ಮುಂತಾದ ಹೂವುಗಳ ಪುಟ್ಟ ಗಿಡಗಳನ್ನು ಊರವರಲ್ಲಿ ಸಂಗ್ರಹಿಸುವ ಯೋಚನೆ ಮಾಡಲಾಯಿತು.

ಹಾಪ್ ಕಾಮ್ಸ್ ನಲ್ಲಿ ಮಾರಾಟವಾಗದೆ ಉಳಿದ ಅಥವಾ ಹಾಳಾದ ರಂಬೋಟ್, ಪಪ್ಪಾಯಿ. ಸೀಬಳ(ಚಿಪ್ಪಡ್ ) ಮುಂತಾದ ಹಣ್ಣುಗಳನ್ನು ತಂದು ಅವುಗಳ ಬೀಜದಿಂದ ಗಿಡ ತಯಾರಿಸುವ ಕಾರ್ಯ ಆರಂಭಿಸಲಾಯಿತು.

ಕನಿಷ್ಟ ಐದು ಸಾವಿರ ಗಿಡಗಳನ್ನು ಮಾಡಿ ಸ್ಥಳೀಯರಿಗೆ ಸಂಘಸಂಸ್ಥೆಗಳಿಗೆ ಅಗತ್ಯ ಇರುವವರಿಗೆ ನೀಡುವ ಯೋಜನೆಗೆ ಚಾಲನೆ ದೊರೆತಿದ್ದು ಈಗಾಗಲೇ ಏಳು ನೂರಕ್ಕೂ ಹೆಚ್ಚು ಗಿಡ ತಯಾರಾಗಿದೆ.

Edited By : Shivu K
Kshetra Samachara

Kshetra Samachara

01/08/2021 09:40 am

Cinque Terre

25.22 K

Cinque Terre

0

ಸಂಬಂಧಿತ ಸುದ್ದಿ