ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಜಾನಪದ ಹಾಡಿಗೆ ನವಚೈತನ್ಯ; ವಂದನಾರಿಂದ ಅಭಿನಂದನೀಯ ಕೈಂಕರ್ಯ

ಕಾರ್ಕಳ: ಇವರ ಹೆಸರು ವಂದನಾ ರೈ ಕಾರ್ಕಳ. ತನ್ನ ವಿಶಿಷ್ಟ ಆದರೆ, ಅಷ್ಟೇ ಸರಳ ರೀತಿಯ ಜಾನಪದ ಹಾಡು ನುಡಿಗೆ ತಕ್ಕಂತೆ ವಿಶೇಷ ಕುಣಿತ- ಮಾತುಗಾರಿಕೆ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ.

ಮಕ್ಕಳೊಂದಿಗೆ ಥೇಟ್ ಮಗುವಿನಂತಾಗಿ ಹಿರಿಯರ ಸಹಿತ ಕಿರಿಯರ ಮೊಗದಲ್ಲೂ ನಗು-ಖುಷಿ ತುಂಬುತ್ತಾರೆ. ಚಿಣ್ಣರ ಚಿನ್ನದಂತಹ ಮನವನ್ನೂ ಸಂಪೂರ್ಣ ಅರ್ಥೈಸಿದಂತೆ ಮಾತನಾಡುವ, ತೋರುವ ನಯವಿನಯ- ಅಭಿನಯ ಎಲ್ಲರಿಗೂ ಇಷ್ಟವಾಗುತ್ತದೆ.

"ಹಳೆಯ ಜಾನಪದ ಹಾಡುಗಳಿಗೆ ಹೊಸ ಹುರುಪನ್ನು ಕೊಟ್ಟಾಗ ಖಂಡಿತಾ ನಮ್ಮ ನೆಲದ ಸಂಸ್ಕೃತಿ ಉಳಿಯುತ್ತವೆ. ಮೌಲ್ಯಯುತವಾದ ನಮ್ಮ ಜಾನಪದ ಸಂಸ್ಕೃತಿ- ಆಚಾರವಿಚಾರ ಉಳಿಸಿ, ಬೆಳೆಸುವುದು ನಮ್ಮ ಕೈಯಲ್ಲಿದೆ" ಎನ್ನುತ್ತಾರೆ ವಂದನಾ.

Edited By : Manjunath H D
Kshetra Samachara

Kshetra Samachara

19/02/2021 08:00 pm

Cinque Terre

22.38 K

Cinque Terre

1

ಸಂಬಂಧಿತ ಸುದ್ದಿ