ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಬಡ ಕುಟುಂಬಕ್ಕೆ ನೆರವಿನ ಹಸ್ತ ಶ್ಲಾಘನೀಯ; ಐಕಳ ಹರೀಶ್ ಶೆಟ್ಟಿ

ಮುಲ್ಕಿ: ಜಾಗತಿಕ ಬಂಟರ ಸಂಘ ವಸತಿ ಯೋಜನೆಯಡಿಯಲ್ಲಿ ಓಂ ಶಕ್ತಿ ಮಹಿಳಾ ಸಂಘಟನೆ ಮುಂಬೈ ಕಲ್ಯಾಣ್ ಹಾಗೂ ಮುಲ್ಕಿ ಬಂಟರ ಸಂಘದ ಸಹಕಾರದೊಂದಿಗೆ ಕಿನ್ನಿಗೋಳಿ ಸಮೀಪದ ಉಲ್ಲಂಜೆಯ ಕಡು ಬಡಕುಟುಂಬದ ಸುಶೀಲಾ ಶೆಟ್ಟಿ ಎಂಬವರಿಗೆ ನೂತನ ಮನೆಯ ನಿರ್ಮಾಣಕ್ಕೆ ಶಿಲಾನ್ಯಾಸ ಕೊಡೆತ್ತೂರು ವೇದವ್ಯಾಸ ಉಡುಪರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಜಾಗತಿಕ ಬಂಟರ ಸಂಘದ ಒಕ್ಕೂಟ ವತಿಯಿಂದ ಅನೇಕ ಸಂಘಟನೆಗಳ ಸಹಕಾರದೊಂದಿಗೆ ಇದುವರೆಗೆ 130ಕ್ಕೂ ಹೆಚ್ಚು ಬಡ ಕುಟುಂಬಕ್ಕೆ ನೂತನ ಮನೆ ಕಟ್ಟಿಸಿಕೊಡಲಾಗಿದ್ದು, ಇನ್ನಷ್ಟು ಇಂತಹ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ದೆ ಮಾತನಾಡಿ, ಸಮಾಜದಲ್ಲಿ ತೀರಾ ಬಡವರನ್ನು ಗುರುತಿಸಿ ಸಹಾಯಹಸ್ತ ನೀಡುತ್ತಿರುವ ಜಾಗತಿಕ ಬಂಟರ ಸಂಘದ ಒಕ್ಕೂಟದ ಕಾರ್ಯ ಶ್ಲಾಘನೀಯ. ಮುಲ್ಕಿಯ 32 ಗ್ರಾಮ ಸಹಿತ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮುಳಿಹುಲ್ಲಿನ ಮನೆಗಳನ್ನು ಗುರುತಿಸಿ, ಬಡಕುಟುಂಬಕ್ಕೆ ನೆರವು ನೀಡಲಾಗುವುದು ಎಂದರು.

ಈ ಸಂದರ್ಭ ಕಾರ್ಯಕ್ರಮಕ್ಕೆ ನೆರವು ನೀಡಿದ ಮುಂಬೈ ಕಲ್ಯಾಣ್ ಓಂಶಕ್ತಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಚಿತ್ರಾ ಆರ್. ಶೆಟ್ಟಿ, ಪದಾಧಿಕಾರಿಗಳಾದ ವಿನೋದ ಆರ್. ಶೆಟ್ಟಿ, ಕುಶಲ ಆರ್ .ಶೆಟ್ಟಿ, ಸುರೇಖ ಶೆಟ್ಟಿ, ಅವರನ್ನು ಗೌರವಿಸಲಾಯಿತು. ಜಾಗತಿಕ ಬಂಟರ ಸಂಘದ ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀಧರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ದೇವಿಪ್ರಸಾದ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ನಿಶಾಂತ್ ಶೆಟ್ಟಿ ಕಿಲೆಂಜೂರು ಸ್ವಾಗತಿಸಿದರು. ಶ್ರೀಶ ಸರಾಫ್ ಐಕಳ ವಂದಿಸಿದರು. ಶರತ್ ಶೆಟ್ಟಿ ಸಂಕಲಕರಿಯ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

18/02/2021 01:09 pm

Cinque Terre

9.99 K

Cinque Terre

0

ಸಂಬಂಧಿತ ಸುದ್ದಿ