ಉಡುಪಿ: ದಿ. ಎನ್. ಪದ್ಮಾಕ್ಷಿ ಬಲ್ಲಾಳ್ ಅವರ 16ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮವನ್ನು ಅವರ ಪುತ್ರ ಮುರಳೀಧರ್ ಬಲ್ಲಾಳ್ ಅವರು ಉಪ್ಪೂರು 'ಸ್ಪಂದನ' ವಿಶೇಷ ಚೇತನ ಮಕ್ಕಳ ಆಶ್ರಮದಲ್ಲಿ ಗುರುವಾರ ಆಯೋಜಿಸುವ ಮೂಲಕ ಹೊಸ ಮೇಲ್ಪಂಕ್ತಿ ಹಾಕಿದ್ದಾರೆ.
ಆಶ್ರಮದಲ್ಲಿ ಆಶ್ರಯ ಪಡೆದಿರುವ ವಿಶೇಷಚೇತನ ಮಕ್ಕಳಿಗೆ ವಿಶೇಷ ಭೋಜನ ಬಡಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾತಿ ಎಮ್. ಬಲ್ಲಾಳ್, ಲಕ್ಷ್ಮೀ ಬಲ್ಲಾಳ್ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹ ಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಸ್ಪಂದನ ಸಂಸ್ಥೆಯ ಸಂಚಾಲಕ ಜನಾರ್ದನ ಉಪಸ್ಥಿತರಿದ್ದರು.
Kshetra Samachara
28/01/2021 07:26 pm