ಉಡುಪಿ: ಗಣರಾಜ್ಯೋತ್ಸವದಲ್ಲಿ ಆರ್ಮಿ ಯೂನಿಫಾರ್ಮ್ ನಲ್ಲಿ ಗಮನ ಸೆಳೆದ ಮೂರು ವರ್ಷದ ಮಯೂರಿ

ಉಡುಪಿ ಜಿಲ್ಲಾಡಳಿತ ವತಿಯಿಂದ 72ನೇ ಗಣರಾಜ್ಯೋತ್ಸವ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದಾಗ ಎಲ್ಲರ ಗಮನ ಸೆಳೆದದ್ದು ಈ ಪುಟಾಣಿ.ಇಡೀ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಭದ್ರತೆ ಕೊಟ್ಟಂತೆ ಮೂರೂವರೆ ವರ್ಷದ ಮಗು ಮಯೂರಿ ಮಷೀನ್ ಗನ್ ಹಿಡಿದು ಓಡಾಡಿದ್ದು ವಿಶೇಷವಾಗಿತ್ತು.

ಮಯೂರಿ ಪ್ರಭು ಆರ್ಮಿಯ ಯೂನಿಫಾರ್ಮ್ ನಲ್ಲಿ ಬಂದಿದ್ದಳು. ಕೈಯಲ್ಲಿ ಮಷೀನ್ ಗನ್ ಹಿಡಿದು ಸಭಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲೆ ಓಡಾಡಿದಳು. ಧ್ವಜಾರೋಹಣ, ಪಥಸಂಚಲನ, ಸಭೆ ಸನ್ಮಾನ ಸಂದರ್ಭ ಮೈದಾನದಲ್ಲಿ ನಿಂತು ಎಲ್ಲವನ್ನೂ ವೀಕ್ಷಿಸಿದಳು. ಸಚಿವ ಎಸ್ ಅಂಗಾರ, ಡಿಸಿ ಜಿ ಜಗದೀಶ್ , ಎಸ್ ಪಿ ಶಾಸಕರು, ಎಲ್ಲಾ ಗಣ್ಯರಿಗೂ ಮಯೂರಿ ಗಣರಾಜ್ಯೋತ್ಸವದ ಶುಭ ಹಾರೈಸಿದ್ದಾಳೆ.

Kshetra Samachara

Kshetra Samachara

1 month ago

Cinque Terre

10.8 K

Cinque Terre

0