ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಕೆನರಾ ಉತ್ಸವದಲ್ಲಿ ಮಹಿಳಾ ಕರಕುಶಲ ಉತ್ಪನ್ನ ಮೆರುಗು

ಉಡುಪಿ: ಮಣಿಪಾಲದ ಮಹಿಳೆಯರ ಉದ್ಯಮಾಭಿವೃದ್ಧಿ ಕೇಂದ್ರ (ಸಿಇಡಿ) ವತಿಯಿಂದ ಜ. 12 ಮತ್ತು 13ರಂದು ಕೆನರಾ ಉತ್ಸವ ನಡೆಯಿತು.ಎರಡು ದಿನಗಳ ವರೆಗೆ ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಹೆಡ್‍ಆಫೀಸ್ ಸರ್ಕಲ್ ಕಚೇರಿಯ ಆವರಣದಲ್ಲಿ ನಡೆದ ಉತ್ಸವಕ್ಕೆ ಭಾರಿ ಜನ ಬೆಂಬಲ, ಸ್ಪಂದನೆ ಸಿಕ್ಕಿದೆ.

ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ನಡೆದ ಉತ್ಸವದಲ್ಲಿ ಹಲವು ಮಹಿಳಾ ಉದ್ಯಮಿಗಳು ತಯಾರಿಸಿದ ನಾನಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.ಈ ಪ್ರದರ್ಶನದಲ್ಲಿ ಕಲೆ, ಕುಸುರಿ, ಆಹಾರ ಪದಾರ್ಥ, ಪರಿಸರ ಸ್ನೇಹಿ ಉತ್ಪನ್ನ, ಫ್ಯಾಷನ್ ಮತ್ತಿತರ ವಿವಿಧ ಕ್ಷೇತ್ರಗಳ 26 ಉದ್ಯಮಶೀಲ ಮಹಿಳೆಯರು ಭಾಗವಹಿಸಿದ್ದರು.

ಕೈಯಿಂದಲೇ ತಯಾರಿಸಿದ ಅನೇಕ ಉತ್ಪನ್ನಗಳು ಲಭ್ಯವಿದ್ದು, ವಿವಿಧ ಬಗೆಯ ವಸ್ತುಗಳನ್ನು ಒಂದೇ ವೇದಿಕೆಯಡಿ ಖರೀದಿಸಲು ಇದೊಂದು ವಿಶೇಷ ಅವಕಾಶವಾಗಿತ್ತು. ಸ್ವಾವಲಂಬಿ ಜೀವನ ನಡೆಸುತ್ತಿರುವ ಹಲವು ಮಹಿಳೆಯರು ತಾವೇ ಉತ್ಪಾದಿಸಿದ ಉತ್ಪನ್ನಗಳನ್ನು ಕೈಗೆಟಕುವ ಬೆಲೆಗೆ ಮಾರಾಟ ಮಾಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾದರು.

Edited By : Manjunath H D
Kshetra Samachara

Kshetra Samachara

13/01/2021 07:40 pm

Cinque Terre

24.12 K

Cinque Terre

0

ಸಂಬಂಧಿತ ಸುದ್ದಿ