ಮಂಗಳೂರು: 'ಎತ್ತಣ ಬೆಲ್ಜಿಯಂ, ಎತ್ತಣ ಚಿತ್ರಾಪುರ' ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಬೆಲ್ಜಿಯಂ ದೇಶದ ಮನೋರೋಗ ತಜ್ಞೆ ಡಾ. ಎಮ್ಮಾ ಫರ್ನಾಂಡಿಸ್ ಎಂಬವರು ಬರೋಬ್ಬರಿ 10 ದಿನಗಳ ಕಾಲ ಮಂಗಳೂರಿನ ಹೊರವಲಯದಲ್ಲಿರುವ ಚಿತ್ರಾಪುರ ಬೀಚ್ ಸ್ವಚ್ಛತೆ ಮಾಡಿದ್ದಾರೆ.
ಮಂಗಳೂರಿನ ಉರ್ವದ ರಾಷ್ಟ್ರೀಯ ಮಟ್ಟದ ಫುಟ್ ಬಾಲ್ ಆಟಗಾರರಾಗಿದ್ದ ಡೆನ್ಜಿಲ್ ಫರ್ನಾಂಡಿಸ್ ಅವರನ್ನು ಪ್ರೇಮಿಸಿ ವಿವಾಹವಾಗಿರುವ ಡಾ. ಎಮ್ಮಾ ಫರ್ನಾಂಡಿಸ್ ಮಂಗಳೂರಿಗೆ ವರ್ಷಕ್ಕೊಂದೆರಡು ಬಾರಿ ಬರುತ್ತಾರೆ. ಈ ಸಂದರ್ಭದಲ್ಲಿ ಚಿತ್ರಾಪುರದಲ್ಲಿರುವ ರೆಸಾರ್ಟ್ ನಲ್ಲಿ ತಂಗುತ್ತಾರೆ. ಆಗ ಅವರು ಬೀಚ್ ಸ್ವಚ್ಛತೆಯಲ್ಲಿ ತೊಡಗುತ್ತಾರೆ.
ಈ ಬಾರಿ ಮಂಗಳೂರಿಗೆ ಬಂದವರು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಮರಳಿ ತಮ್ಮ ತಾಯ್ನಾಡಿಗೆ ತೆರಳಲಾಗದೆ ಇಲ್ಲಿನ ಬೀಚ್ ಕ್ಲೀನಿಂಗ್ ನಲ್ಲಿ ತೊಡಗಿದ್ದಾರೆ. ಮಂಗಳೂರಿನಲ್ಲಿದ್ದ ಅಷ್ಟೂ ದಿನಗಳ ವರೆಗೆ ಅವರು ಮಾನಸಿಕ ರೋಗಿಗಳಿಗೆ ಚಿಕಿತ್ಸೆ, ಕೌನ್ಸೆಲಿಂಗ್ ಮಾಡುತ್ತಿದ್ದರು. ಈ ಕಾರ್ಯ ಮಧ್ಯಾಹ್ನ 2ರಿಂದ ರಾತ್ರಿ 8ರ ವರೆಗೆ ಇರುತ್ತಿತ್ತು. ಆದ್ದರಿಂದ ಅವರು ಬೆಳಗ್ಗೆ ಎರಡು ಗಂಟೆಗಳ ಕಾಲ ಬೀಚ್ ಕ್ಲೀನಿಂಗ್ ನಲ್ಲಿ ತೊಡಗುತ್ತಿದ್ದರು. ದಿನವೂ 6-9 ಚೀಲ ಕಸ ಹೆಕ್ಕಿ ಎಲ್ಲರಿಗೂ ಮಾದರಿಯಾಗಿರುವ ಡಾ.ಎಮ್ಮಾ ಫರ್ನಾಂಡಿಸ್ ಅವರಿಗೆ ಎಲ್ಲ ಮಂಗಳೂರಿಗರು ಕೃತಜ್ಞತೆ ಸಲ್ಲಿಸಲೇಬೇಕಾಗಿದೆ.
Kshetra Samachara
01/01/2021 12:03 pm