ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: ಅಗೋ ನೋಡಿ ಎತ್ತಿನ ಕಾರು ಬಂತು...;ಇದು ಡಾ.ಹೆಗ್ಗಡೆಯವರ ಹೊಸ ಐಡಿಯಾ!

ಪಬ್ಲಿಕ್ ನೆಕ್ಸ್ಟ್ ವಿಶೇಷ

ಧರ್ಮಸ್ಥಳ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರತಿ ವಸ್ತುವಿನಲ್ಲೂ ಹೊಸತನ ಕಾಣುವಂತಹ ಮಾದರಿ ವ್ಯಕ್ತಿ.

ಇದಕ್ಕೆ ಉದಾಹರಣೆಯೇ ಈ ಎತ್ತಿನಗಾಡಿ.

ಹೌದು, ಧರ್ಮಸ್ಥಳಕ್ಕೆ ನೀವು ಭೇಟಿ ಕೊಟ್ಟಾಗ ಆಧುನಿಕ ಎತ್ತಿನಗಾಡಿಯೊಂದು ನಿಮ್ಮ ಗಮನ ಸೆಳೆಯುವುದಂತೂ ಗ್ಯಾರಂಟಿ.

ಎತ್ತಿನ ಬಲದಿಂದ ಓಡಾಡುವ ಈ ತೇರು ಪರಿಸರ ಸ್ನೇಹಿ. ಗಾಡಿ ಎಳೆಯಲು ಎತ್ತುಗಳಿಗೆ ತ್ರಾಸವಾಗದಂತೆ ಪರಿವರ್ತಿತ ಸಲಕರಣೆ ಬಳಸಲಾಗಿದೆ.

ಗಾಡಿಗೆ ಆಧುನಿಕ ರಬ್ಬರ್ ಚಕ್ರ, ಹೈಡ್ರಾಲಿಕ್ ಬ್ರೇಕ್, ಪಾರ್ಕಿಂಗ್ ಜ್ಯಾಕ್ ಕೂಡ ಆಳವಡಿಸಲಾಗಿದೆ. ಹೀಗಾಗಿ ಎಳೆಯುವ ವೇಳೆ ಎತ್ತಿಗೆ ಅತಿ ಹಗುರ ಅನುಭೂತಿಯಾಗುವ ವಿನ್ಯಾಸದಲ್ಲಿದೆ.

ಮಂಗಳೂರಿನಿಂದ ತರಿಸಿದ್ದ ಹಳೆಯ ಅಂಬಾಸಿಡರ್ ಕಾರಿನ ಹಿಂಭಾಗ ಉಳಿಸಿಕೊಂಡು, ಮುಂಭಾಗದಲ್ಲಿ ಎತ್ತುಗಳಿಗೆ ಎಳೆಯಲು ಸುಲಭ ಸಾಧ್ಯವಾಗುವಂತೆ ನಿರ್ಮಿಸಲಾಗಿದೆ.

ಓಂಗೋಲ್ ತಳಿಯ ಎರಡು ಎತ್ತುಗಳನ್ನು ಉಪಯೋಗಿಸಲಾಗಿದೆ. ಚಕ್ರಗಳಿಗೆ, ವಿಭಿನ್ನ ವಿನ್ಯಾಸದ ವ್ಹೀಲ್ ಕ್ಯಾಪ್ ಹಾಕಲಾಗಿದ್ದು, ವಾಹನ ನಿಲ್ಲಲು ಸಹಾಯವಾಗುವಂತೆ ಬ್ರೇಕನ್ನೂ ಆಳವಡಿಸಲಾಗಿದೆ.

ಮಂಜೂಷಾ ಕಾರು ಸಂಗ್ರಹಾಲಯದ ಸಿಬ್ಬಂದಿ ಮತ್ತು ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ನ ಪಾತ್ರ ಈ ವಿಶೇಷ ಗಾಡಿಯಲ್ಲಿದೆ.

Edited By : Manjunath H D
Kshetra Samachara

Kshetra Samachara

31/12/2020 04:54 pm

Cinque Terre

17.82 K

Cinque Terre

2