ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಗಣೇಶೋತ್ಸವ ಮೆರವಣಿಗೆ ಸಂದರ್ಭ ಮುಸ್ಲಿಂ ಬಾಂಧವರಿಂದ ಸಿಹಿತಿಂಡಿ, ತಂಪು ಪಾನೀಯ.!

ಕಾಪು: ಹಿಂದಿನಿಂದಲೂ ಕರಾವಳಿ ಜಿಲ್ಲೆಗಳು ಸೌಹಾರ್ದಕ್ಕೆ ಹೆಸರುವಾಸಿ.ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಿದ್ದರೂ ಇಲ್ಲಿಯ ಜನ ಸೌಹಾರ್ದಪ್ರಿಯರು ಎಂಬುದು ಸಾಬೀತಾಗುತ್ತಲೇ ಇರುತ್ತವೆ.

ಕಾಪು ತಾಲೂಕಿನ ಕುರ್ಕಾಲು ಗಣೇಶೋತ್ಸವದಲ್ಲಿ ಸ್ಥಳೀಯ ಸುಭಾಶ್ ನಗರದ ಮುಸ್ಲಿಂ ಯುವಕರು ಸೌಹಾರ್ದತೆ ಮೆರೆದಿದ್ದಾರೆ. ಕುರ್ಕಾಲು ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಸಂದರ್ಭ ಹಿಂದೂ ಬಾಂಧವರಿಗೆ ಸಿಹಿ ಹಂಚಿದ್ದಾರೆ. ತಂಪು ಪಾನೀಯ ನೀಡಿ ಉಪಚರಿಸಿದ್ದಾರೆ.ನೂರಾರು ಸಂಖ್ಯೆಯಲ್ಲಿದ್ದ ಹಿಂದೂ ಬಾಂಧವರು ಖುಷಿಯಿಂದಲೇ ಮುಸ್ಲಿಂ ಯುವಕರ ಉಪಚಾರಕ್ಕೆ ಕೃತಜ್ಞತೆ ಸಲ್ಲಿಸಿದರು.ಹಿಂದೂ ಮುಸ್ಲಿಂ ಸೌಹಾರ್ದಕ್ಕೆ ಮಾದರಿಯಾದ ಈ ಬೆಳವಣಿಗೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.ಮಾತ್ರವಲ್ಲ, ಇದು ಹೀಗೇ ಮುಂದುವರೆಯಬೇಕು ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

Edited By : Manjunath H D
Kshetra Samachara

Kshetra Samachara

03/09/2022 11:39 am

Cinque Terre

10.97 K

Cinque Terre

4