ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಚರ್ಚ್ ಗೆ ತೆರಳಿ ಕ್ಯಾಂಡಲ್ ಹೊತ್ತಿಸಿ, ಸೌಹಾರ್ದತೆಯ ಬೆಳಕು ಬೀರಿದ ಅಯ್ಯಪ್ಪ ಸ್ವಾಮಿ ಭಕ್ತರು

ಶಂಕರಪುರ: ಶಂಕರಪುರ ಸೈಂಟ್ ಜಾನ್ಸ್ ಚರ್ಚಿನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಸರ್ವಧರ್ಮ ಸೌಹಾರ್ದತೆ ಸಾರುವ ವಾರ್ಷಿಕ ಜಾತ್ರೆಗೆ ಎಲ್ಲ ಧರ್ಮೀಯರೂ ಹೋಗುವುದು ವಾಡಿಕೆ. ಈ ಬಾರಿ ಶ್ರೀ ಅಯ್ಯಪ್ಪ ಮಾಲಾಧಾರಿಗಳಾದ ಚಂದ್ರಹಾಸ ಗುರುಸ್ವಾಮಿ ಮತ್ತು ಶಿಷ್ಯರು ಚರ್ಚಿಗೆ ತೆರಳಿ ಕ್ಯಾಂಡಲ್ ಹೊತ್ತಿಸಿ ಪ್ರಾರ್ಥಿಸಿದ್ದು, ಮಾದರಿ ಎನಿಸಿದೆ.

ಕರಾವಳಿಯಲ್ಲಿ ಕೋಮು ಸೌಹಾರ್ದತೆಗೆ ಕಿಚ್ಚಿಡುವವರ ನಡುವೆ ಈ ಅಯ್ಯಪ್ಪ ಮಾಲಾಧಾರಿಗಳ ನಡೆ ಕೋಮು‌ ಸೌಹಾರ್ದತೆ ಇವತ್ತಿಗೂ ಚಾಲ್ತಿಯಲ್ಲಿದೆ ಎಂಬುದಕ್ಕೆ ಸಾಕ್ಷಿ. ಶಂಕರಪುರ ಸಾರ್ವಜನಿಕ ಅಯ್ಯಪ್ಪ ಭಕ್ತವೃಂದದ ಅಯ್ಯಪ್ಪ ಭಕ್ತರು ಮತ್ತು ಮುಂಬೈ ಚಂದ್ರಹಾಸ ಗುರುಸ್ವಾಮಿ ಶಿಷ್ಯರ ಈ ಸಾಮರಸ್ಯದ ಕೈಂಕರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Edited By : Manjunath H D
PublicNext

PublicNext

29/12/2021 06:23 pm

Cinque Terre

47 K

Cinque Terre

26

ಸಂಬಂಧಿತ ಸುದ್ದಿ