ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾಳೆ (ಆ.30) ಆರು ಮಕ್ಕಳ ಚಿಕಿತ್ಸೆಗೆ 14.35 ಲಕ್ಷ ರೂ. ಹಸ್ತಾಂತರಿಸಲಿರೋ ರವಿ ಕಟಪಾಡಿ!

ಅಷ್ಟಮಿಯಂದು ವಿಶಿಷ್ಟ ವೇಷಭೂಷಣ ಹಾಕಿ, ಅದರಿಂದ ಸಂಗ್ರಹವಾದ ಮೊತ್ತವನ್ನು ರವಿ ಕಟಪಾಡಿ ನಾಳೆ ಆರು ಮಕ್ಕಳ ಚಿಕಿತ್ಸೆಗೆ ಹಸ್ತಾಂತರಿಸಲಿದ್ದಾರೆ.

ರವಿ ಕಟಪಾಡಿ ಈ ಬಾರಿ ಡೀಮನ್ ರೂಪದಲ್ಲಿ ಕಾಣಿಸಿಕೊಂಡಿದ್ದು, ವೇಷ ಧರಿಸಿ ಸಂಗ್ರಹಿಸಿದ ಸುಮಾರು 14.35 ಲಕ್ಷ ರೂ. ಹಣವನ್ನು 6 ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಹಸ್ತಾಂತರಿಸಲಿದ್ದಾರೆ. ಆ.30ರಂದು ಸಾಯಂಕಾಲ 5ಕ್ಕೆ ಕಟಪಾಡಿ ಪೇಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನ ಹಾಗೂ ಕೊರಗ ಸನ್ನಿಧಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಸ್‌ಪಿ ಅಕ್ಷಯ್‌ ಹಾಕೆ ಭಾಗವಹಿಸಲಿದ್ದಾರೆ.

ಕಳೆದ ಏಳು ವರ್ಷದಿಂದ ಕೃಷ್ಣ ಜನ್ಮಾಷ್ಟಮಿಯಂದು ಕಲಾವಿದ ರವಿ ಕಟಪಾಡಿ ವೇಷಧರಿಸಿ ಸಂಗ್ರಹಿಸಿದ ಒಟ್ಟು ಮೊತ್ತ 89.75 ಲಕ್ಷ ರೂ.ಯನ್ನು ಅನಾರೋಗ್ಯ ಪೀಡಿತರಿಗೆ ನೀಡಿದ್ದಾರೆ. ಈ ಬಾರಿ 14 ಲಕ್ಷ ರೂ. ಸೇರಿ ಒಟ್ಟು 1.4 ಕೋಟಿ ರೂ.ಹಣವನ್ನು ದಾನವಾಗಿ ನೀಡಿರುವುದು ದಾಖಲೆಯಾಗಿದೆ.

Edited By :
PublicNext

PublicNext

29/08/2022 04:09 pm

Cinque Terre

30.67 K

Cinque Terre

1

ಸಂಬಂಧಿತ ಸುದ್ದಿ