ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಉರಗ ತಜ್ಞ , ಪ್ರಾಣಿಪ್ರೇಮಿಯೊಬ್ಬರ ವಿಶಿಷ್ಟ ಶಪಥ ಈಡೇರಿದ್ದು ಹೇಗೆ ಗೊತ್ತೆ?

ಬ್ರಹ್ಮಾವರ: ಈ ಸುದ್ದಿ ತಮಾಷೆಯಾಗಿ ಕಂಡರೂ,ಕೆಲವೊಬ್ಬರ ಹಠ,ಶಪಥ ಹೇಗಿರುತ್ತವೆ ಮತ್ತು ಅದು ಈಡೇರಿದಾಗ ಎಂಥ ಸಾರ್ಥಕತೆ ಅನುಭವಿಸುತ್ತಾರೆ ಎಂಬುದಕ್ಕೆ ಒಂದು ತಾಜಾ ಉದಾಹರಣೆ ಇಲ್ಲಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಪ್ರಾಣಿಪ್ರಿಯ ಸುಧೀಂದ್ರ ಐತಾಳರು13 ವರ್ಷಗಳ ಹಿಂದೆ, ತನ್ನ ವಿರುದ್ಧ ದಾಖಲಾದ ಪ್ರಕರಣದಲ್ಲಿ ದೋಷಮುಕ್ತನಾಗುವವರೆಗೂ ಕೂದಲು, ಗಡ್ಡ ತೆಗೆಯುವುದಿಲ್ಲ ಅಂತ ಶಪಥ ಮಾಡಿದ್ದರು! ಸದ್ಯ ಪ್ರಕರಣ ವಜಾಗೊಂಡ ಹಿನ್ನೆಲೆಯಲ್ಲಿ ಕೂದಲು, ಗಡ್ಡಕ್ಕೆ ಕತ್ತರಿ ಹಾಕುವ ಮೂಲಕ ದೀರ್ಘಕಾಲದ ಶಪಥ ಅಂತ್ಯಗೊಳಿಸಿದ್ದಾರೆ!

ಕೋಟದ ಶ್ರೀ ಗುರುನರಸಿಂಹ ದೇಗುಲದ ಬಳಿಯ ತಮ್ಮ ಮನೆಯಲ್ಲಿ ಐತಾಳರು ಪ್ರಾಣಿ ಸಂರಕ್ಷಣಾ ಕೇಂದ್ರ ನಡೆಸುತ್ತಿದ್ದರು.

ಇದರಲ್ಲಿ ಅಪರೂಪದ ತಳಿಯ ವನ್ಯ ಜೀವಿಗಳನ್ನು ಇರಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅರಣ್ಯಧಿಕಾರಿಗಳು ದಾಳಿ ನಡೆಸಿ, ವನ್ಯಜೀವಿಗಳನ್ನು ವಶಪಡಿಸಿ ಕೇಸು ದಾಖಲಿಸಿದ್ದರು.

ಇತ್ತ ಕೋರ್ಟ್ ‌ನಲ್ಲಿ ಐತಾಳರು, ದುರುದ್ದೇಶದಿಂದ ಹೀಗೆ ಮಾಡಿಲ್ಲ. ಅಪಾಯದಿಂದ ರಕ್ಷಣೆ ಮಾಡಿದ್ದೇನೆ ಎಂದು ಪ್ರತಿಪಾದನೆ ಮಾಡುತ್ತಾ ಬಂದಿದ್ದರು.

ಇದರ ನಡುವೆ ನಡೆದ ಐತಾಳರ ಮದುವೆಗೂ ಗಡ್ಡ ತೆಗೆಯದೇ ಶಪಥ ಉಳಿಸಿಕೊಂಡಿದ್ದರು. ಕೊನೆಗೆ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಐತಾಳರ ಪ್ರಕರಣ ವಜಾ ಆಗಿ ಆರೋಪ ಮುಕ್ತರಾದರು.

ಇದೀಗ ತಾನು ಕೈಗೊಂಡ ಶಪಥದಂತೆ 13 ವರ್ಷಗಳ ಶಪಥವನ್ನು ಕೂದಲು, ಗಡ್ಡಕ್ಕೆ ಕತ್ತರಿ ಹಾಕಿ ಅಂತ್ಯಗೊಳಿಸಿದ್ದಾರೆ! ಐತಾಳರ ಹಠಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

09/10/2020 04:29 pm

Cinque Terre

42.73 K

Cinque Terre

1

ಸಂಬಂಧಿತ ಸುದ್ದಿ