ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಗನಿಗಾಗಿ ಕೊರಗಜ್ಜನಿಗೆ ಹರಕೆ ಹೊತ್ತಿದ್ದ ಮೃಣಾಲ್ ತಾಯಿ!

ಉದ್ಯಾವರ: ಯುದ್ಧಭೂಮಿ ಉಕ್ರೇನ್‌ನಿಂದ ಒಬ್ಬೊಬ್ಬರೇ ಕನ್ನಡಿಗರು ತವರಿಗೆ ವಾಪಸಾಗುತ್ತಿದ್ದಾರೆ. ಈ ಮಧ್ಯೆ ತಮ್ಮ ಮಕ್ಕಳು ಸುರಕ್ಷಿತವಾಗಿ ಬರಲಿ ಎಂದು ಹೆತ್ತವರು ಹರಕೆ ಹೊರುವುದು ಸಾಮಾನ್ಯ. ಉಡುಪಿಯ ಉದ್ಯಾವರದ ಮೃಣಾಲ್ ಶೀಘ್ರ ವಾಪಾಸಾಗುವಂತಾಗಲಿ ಎಂದು ಪೋಷಕರು ಹರಕೆ ಹೇಳಿದ ವಿಚಾರ ಈಗ ಗೊತ್ತಾಗಿದೆ.

ಮೃಣಾಲ್ ತಾಯಿ ಸಂಧ್ಯಾ ಕಟಪಾಡಿ ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ದೈವಗಳಿಗೆ ತನ್ನ ಮಗ ಬರುವಂತೆ ಮಾಡು ಎಂದು ಹರಕೆ ಹೇಳಿದ್ದರು. ಕೋಳಿ ಹರಕೆ ಹೊತ್ತಿರುವ ತಾಯಿ, ಈಗ ಹರಕೆ ತೀರಿಸುವ ಸಿದ್ಧತೆ ಮಾಡಿದ್ದಾರೆ. ಇದೇ ಸಂದರ್ಭ ಕಲ್ಮಾಡಿ ಚರ್ಚಿನಲ್ಲಿ ಆರಾಧಿಸುವ ಮರಿಯಮ್ಮನಿಗೆ ಮಗ ಬೇಗ ಮನೆಗೆ ಬಂದರೆ ಒಂದು ಸೀರೆ ಕೊಡುವುದಾಗಿ ಹರಕೆ ಹೇಳಿದ್ದರಂತೆ! ಮಗ ಮೃಣಾಲ್ ಊರಿಗೆ ಬರುತ್ತಿದ್ದಂತೆ ಸಂತಸಗೊಂಡಿರುವ ಪೋಷಕರು ಶೀಘ್ರ ತಮ್ಮ ಎರಡು ಹರಕೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

Edited By :
PublicNext

PublicNext

07/03/2022 05:17 pm

Cinque Terre

53.09 K

Cinque Terre

1

ಸಂಬಂಧಿತ ಸುದ್ದಿ