ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಚಹಾ ಮಾಡಿಡಿ ಎಂದು ಹೇಳಿದ ಮಗ ಬರಲೇ ಇಲ್ಲ; ಪ್ರವೀಣ್ ನೆಟ್ಟಾರು ತಾಯಿಯ ಅಳಲು

ಸುಳ್ಯ: ಬೆಳಗ್ಗೆ ತನ್ನನ್ನು ಮದ್ದಿಗೆಂದು ವೈದ್ಯರಲ್ಲಿಗೆ ಕರೆದೊಯ್ದಿದ್ದ. ಸಂಜೆ ಈಗ ಬರ್ತೀನಿ, ಚಹಾ ಮಾಡಿ ಇಡಿ ಎಂದು ಹೇಳಿದ್ದ ನನ್ನ ಪುತ್ರ ಮತ್ತೆ ಬರಲೇ ಇಲ್ಲ. ಈಗ ನನ್ನ ಮಗುವೇ ಇಲ್ಲದಿದ್ದ ಮೇಲೆ ಯಾವ ದುಡ್ಡು ಸಿಕ್ಕಿದರೂ ಏನು ಪ್ರಯೋಜನ ? ಮಗನೇ ಇಲ್ವಲ್ಲಾ ಎಂದು‌ ಮಗನನ್ನು ಕಳೆದುಕೊಂಡ ತಾಯಿಯ ರೋಧನ ಇದು.

ಹೌದು... ಈ ರೀತಿಯಲ್ಲಿ ಕಳೆದುಕೊಂಡ ಪುತ್ರನನ್ನು ನೆನೆದು ಅಳುವ ತಾಯಿ ಬೇರಾರು ಅಲ್ಲ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರು ತಾಯಿ ರತ್ನಾವತಿ. ಕಣ್ಣೀರು ತುಂಬಿ ಮಾತನಾಡುವ ಈ ತಾಯಿಯ ಮಾತು ಕೇಳಿದರೆ ಎಂಥವನ ಕಲ್ಲೆದೆಯೂ ಕರಗದೇ ಇರದು. 'ನನ್ನ ಪುತ್ರನ ಹಂತಕರ ಬಂಧನ ಸುದ್ದಿ ದೊರಕಿದೆ. ನನಗಿದ್ದಿದ್ದು ಚಿನ್ನದಂತಹ ಒಂದೇ ಒಂದು ಗಂಡು ಮಗ. ಮತ್ತೆ ನಾಲ್ವರು ಹೆಣ್ಣು ಮಕ್ಕಳು. ಇವನು ಎಲ್ಲರ ಪ್ರೀತಿಯ ಮಗ. ಯಾವುದೇ ತಪ್ಪು ಮಾಡದಿದ್ದರೂ ಅವನನ್ನು ಕೊಂದು ಹಾಕಿದರು‌. ಈ ಕೊಚ್ಚುವ, ಕೊಲ್ಲುವ ಪ್ರಕ್ರಿಯೆ ಇಲ್ಲಿಗೇ ನಿಲ್ಲಲಿ. ಇವತ್ತು ನನ್ನ ಮಗನಿಗೆ ಆಗಿದ್ದು ಇನ್ನೊಬ್ಬನಿಗೆ ಆಗಬಾರದು ಎಂದು ಹೇಳಿದರು‌.

ಅವನು ಯಾವುದೇ ಜಗಳಕ್ಕೆ ಹೋದವನಲ್ಲ. ಅವರು ಏಕಾಏಕಿ ಬಂದು ಕೊಂದು ಹಾಕಿದ್ದಾರೆ. ಯಾವತ್ತೂ ಅವನ ಪತ್ನಿ ಚಿಕನ್ ಶಾಪ್‌ನಲ್ಲೇ ಇರುತ್ತಿದ್ದಳು. ಆದರೆ ಕೊಲೆಯಾದ ದಿನ ಅವನ ಪತ್ನಿ ಅವನ ಸೋದರಿಯ ಮನೆಗೆ ಹೋಗಿದ್ದಳು. ಇವನು ನೀನು ಮೊದಲು ಹೋಗು ನಾನು ಮತ್ತೆ ಬರ್ತೀನಿ ಅಂತ ಹೇಳಿದ್ದ. ಹೀಗೆಲ್ಲ ಆಗುತ್ತೆ ಅಂತ ಅವನಿಗೆ ಗೊತ್ತಿರಲಿಲ್ಲ. ಬೆಳ್ಳಾರೆ ಪೊಲೀಸರು ಸರಿ ಇದ್ದಿದ್ದರೆ ಈ ಕೊಲೆ ಆಗುತ್ತಿರಲಿಲ್ಲ. ಅವರು ಎಲ್ಲಿ ಹೋಗಿದ್ದರು?. ಕೊಲೆ ಆರೋಪಿಗಳಿಗೆ ಜಾಮೀನು ಸಿಗಲೇಬಾರದು. ನನ್ನ ಮಗನನ್ನು ಕೊಂದ ಸ್ಥಳದಲ್ಲಿಯೇ ಆರೋಪಿಗಳನ್ನು ಕೊಚ್ಚಿ ಕೊಲ್ಲಬೇಕು. ಆಗ ಅವನ ಆತ್ಮಕ್ಕೂ ಶಾಂತಿ ಸಿಗುತ್ತೆ. ನಮಗೂ ನೆಮ್ಮದಿ ಸಿಗುತ್ತೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Edited By : Somashekar
Kshetra Samachara

Kshetra Samachara

12/08/2022 10:28 pm

Cinque Terre

9.41 K

Cinque Terre

3

ಸಂಬಂಧಿತ ಸುದ್ದಿ