ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: 'ಪದ್ಮಶ್ರೀ' ವಿಜೇತ ಮಹಾಲಿಂಗ ನಾಯ್ಕ ಮನೆಗೆ ತಹಶೀಲ್ದಾರ್ ಭೇಟಿ

ವಿಟ್ಲ: 'ಪದ್ಮಶ್ರೀ' ಪುರಸ್ಕಾರಕ್ಕೆ ಆಯ್ಕೆಗೊಂಡ ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಮನೆಗೆ ಬಂಟ್ವಾಳ ತಹಶೀಲ್ದಾರ್ ನಿಯೋಗ ಭೇಟಿ ನೀಡಿ, ಸಾಧಕರನ್ನು ಸನ್ಮಾನಿಸಿತು.

ತಹಶೀಲ್ದಾರ್ ರಶ್ಮಿ ಎಸ್. ಆರ್. ಅವರು ತಮ್ಮ ಸಿಬ್ಬಂದಿ ಜತೆ ಭೇಟಿ ನೀಡಿದ್ದು, ಮಹಾಲಿಂಗ ನಾಯ್ಕ ಅವರು ಕೊರೆದ ಸುರಂಗ ಮತ್ತು ತೋಟಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಹಾಲಿಂಗ ನಾಯ್ಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

"ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದು, ಖುಷಿ ತಂದಿದೆ. ದ.ಕ. ಜಿಲ್ಲಾಡಳಿತ ವತಿಯಿಂದ ಇಂದು ತಮಗೆ ನೀಡಿದ ಗೌರವ ತುಂಬಾನೇ ಸಂತಸ ತಂದಿದೆ" ಎಂದು ಮಹಾಲಿಂಗ ನಾಯ್ಕ ತಿಳಿಸಿದರು.

ಉಪತಹಶೀಲ್ದಾರ್ ದಿವಾಕರ ಮುಗುಳ್ಯ, ನವೀನ್ ಕುಮಾರ್, ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಕರಣಿಕರಾದ ವಿನುತಾ, ಗ್ರಾಮ ಸಹಾಯಕ ಗಣೇಶ, ತಾಲೂಕು ಕಚೇರಿಯ ಸುಂದರ, ಶಿವಪ್ರಸಾದ್, ಮಹಮ್ಮದ್ ಆಸೀಫ್ ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

26/01/2022 05:55 pm

Cinque Terre

38.94 K

Cinque Terre

4

ಸಂಬಂಧಿತ ಸುದ್ದಿ