ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ಮಹಿಳೆ ಹಾಗೂ ಮಕ್ಕಳ ದೌರ್ಜನ್ಯ ತಡೆಗಟ್ಟುವಲ್ಲಿ ಪಂಚಾಯತ್ ಪಾತ್ರ ಮಹತ್ವದ್ದು: ಗೋಪಿನಾಥ ಪಡಂಗ

ಮುಲ್ಕಿ: ಕಿಲ್ಪಾಡಿ‌ ಗ್ರಾಮ ಪಂಚಾಯತ್ ವತಿಯಿಂದ ಪ್ರಜ್ಞಾ ಸಲಹ ಕೇಂದ್ರದ ಸಹಯೋಗದೊಂದಿಗೆ ಪಂಚಾಯತ್ ಕಾವಲು‌ ಸಮಿತಿ ಸಭೆ ಪಂಚಾಯತ್ ಅಧ್ಯಕ್ಷೆ ‌ಲೀಲಾವತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಪನ್ಮೂಲಗಳ ವ್ಯಕ್ತಿಯಾಗಿ ಸಂಶುದ್ದೀನ್ ಸಂಪ್ಯ ಮಾತನಾಡಿ‌ ಕಾವಲು‌ ಸಮಿತಿ ಯ ಜವಾಬ್ದಾರಿ, ಮಹಿಳೆಯರ ಮಕ್ಕಳ ದೌರ್ಜನ್ಯ, ಸಾಗಾಟ, ಬಾಲ ಕಾರ್ಮಿಕ, ಬಾಲ್ಯ ವಿವಾಹ ಬಗ್ಗೆ ಕಾನೂನು‌ ಮತ್ತು ಕಾವಲು ಸಮಿತಿ ಪಾಲ್ಗೊಳ್ಳುವಿಕೆ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ್ ಪಡಂಗ ಮಾತನಾಡಿ‌ ಪ್ರಜ್ಞಾ ಸಲಹ ಕೇಂದ್ರ ಸಮಾಜಮುಖಿಯಾಗಿ ಕೆಲಸವನ್ನು ಮಾಡುತ್ತಿದ್ದು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಪಂಚಾಯತ್ ಮಹತ್ವದ ಪಾತ್ರದ ಬಗ್ಗೆ ಉತ್ತಮವಾಗಿ ತಿಳಿಸಿದ ಸಂಸ್ಥೆಗೆ ಅಭಿನಂದನೆ‌ ಸಲ್ಲಿಸಿದರು.

ಸಭೆಯಲ್ಲಿ ಗ್ರಾಮ ಕರಣೀಕ ಸುನಿಲ್ ಕುಮಾರ್, ಮುಖ್ಯ ಶಿಕ್ಷಕರು, ಆರೋಗ್ಯ ಸಹಾಯಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯವರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ಅಶೋಕ್ ವಂದಿಸಿದರು

Edited By : Shivu K
Kshetra Samachara

Kshetra Samachara

09/08/2021 05:03 pm

Cinque Terre

9.01 K

Cinque Terre

0