ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಆನ್ ದಿ ವೇ' ವಿನೂತನ ಪ್ರಯೋಗದಿಂದ ಹಣ ಸಂಗ್ರಹಿಸಿ ಸರಕಾರಿ ಶಾಲೆಗೆ ದೇಣಿಗೆ ನೀಡಿದ ಶಿಕ್ಷಕ ದಂಪತಿ

ಮಂಗಳೂರು: ಸರಕಾರಿ‌ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಿಕ್ಷಕ ದಂಪತಿಯಿಂದ 'ಆನ್ ದಿ ವೇ' ಎಂಬ ವಿನೂತನ ಪ್ರಯತ್ನವನ್ನು ಇಂದು ಮಾಡಿದ್ದಾರೆ.

ಅಕ್ಷತಾ ಕುಡ್ಲ ಹಾಗೂ ಚೇತನ್ ಶಿಕ್ಷಕ ದಂಪತಿಯು ಮಂಗಳೂರಿನ ಹೊರವಲಯದ ಉಳಾಯಿಬೆಟ್ಟು ಗ್ರಾಮ ಹಾಗೂ ವಿವಿಧ ಪ್ರದೇಶಗಳ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸಾರ್ವಜನಿಕರೊಂದಿಗೆ ಶಿಕ್ಷಣ ಸಂವಾದ ನಡೆಸಿದ್ದಾರೆ. ಈ ವೇಳೆ ನಾಗರಿಕರಿಂದ ದೇಣಿಗೆ ಸಂಗ್ರಹಿಸಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಲ್ಲದೆ ಈ ವೇಳೆ ಇಬ್ಬರೂ 154 ಹಾಡುಗಳನ್ನು ಹಾಡಿ, 50x53 ಅಡಿ ಗಾತ್ರದ ಮಹಾತ್ಮಾ ಗಾಂಧೀಜಿಯವರ ಬೃಹತ್ ಚಿತ್ರ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಈ ಕಾರ್ಯಕ್ರಮಕ್ಕೆ ಉಳಾಯಿಬೆಟ್ಟು ಗ್ರಾಮದ ವಿಲ್ಸನ್ ಗಾರ್ಡನ್‌ನಲ್ಲಿ ಚಾಲನೆ ನೀಡಲಾಯಿತು. ಅಕ್ಷತಾ ಕುಡ್ಲ ಹಾಗೂ ಚೇತನ್ ದಂಪತಿ ಉಳಾಯಿಬೆಟ್ಟು ಸರಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಅಕ್ಟೋಬರ್ 2ರಿಂದ ಆರಂಭವಾದ 'ಆನ್ ದಿ ವೇ' ಶಿಕ್ಷಣ ಚಾರಣವು ಮುಂದಕ್ಕೆ ಮೂಡಬಿದರೆ, ಬೆಳ್ತಂಗಡಿ, ಮೂಡಿಗೆರೆ ಪ್ರದೇಶಗಳಲ್ಲೂ ನಡೆಯಲಿದೆ.

Edited By : Somashekar
Kshetra Samachara

Kshetra Samachara

02/10/2022 07:02 pm

Cinque Terre

13.8 K

Cinque Terre

2

ಸಂಬಂಧಿತ ಸುದ್ದಿ