ಕಾರ್ಕಳ: ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ ಜರಿಗುಡ್ಡೆ ನಿವಾಸಿ ಡ್ರೈವರ್ ವ್ರತ್ತಿಯ ಶೇಖ್ ಅಬ್ದುಲ್ಲಾ ಹಾಗೂ ಮೈಮೂನ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯರಾದ ಮೊಹಮ್ಮದ್ ಶೌಕತ್ ಅಜೀಮ್ ಯುಪಿಎಸ್‌ಸಿ ಪರೀಕ್ಷೆ ಯಲ್ಲಿ 545 ರ‍್ಯಾಂಕ್ ಗಳಿಸಿದ್ದಾರೆ.
ಇವರು ಪ್ರಾಥಮಿಕ ವಿಧ್ಯಾಭ್ಯಾಸವನ್ನು ಕಾರ್ಕಳ ಜರಿಗುಡ್ಡೆ ಸರಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಕಾರ್ಕಳ ಎಸ್ ವಿ ಟಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಕಾರ್ಕಳ ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಅವರು ಮಿಜಾರು ಮೈಟ್ ವಿಧ್ಯಾ ಸಂಸ್ಥೆಯಲ್ಲಿ ಇ ಆಂಡ್ ಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ
Kshetra Samachara
01/06/2022 08:08 am