ಕಾರ್ಕಳ: ಇಂದಿನ ಮಕ್ಕಳೇ ಹಾಗೆ.. ಚಿಕ್ಕ ವಯಸಿನಿಂದಲೇ ತುಂಬಾನೇ ಚೂಟಿ ಇರ್ತಾರೆ. ಏನಾದರೊಂದು ಅಭ್ಯಸಿದಬೇಕು ಎನ್ನುವ ಛಲ ಮೂಡಿದರೆ ಮಾತ್ರ ಅದರ ಪಾರಿಪಾಠವನ್ನೇ ಉಚ್ಚರಿಸುತ್ತಾರೆ. ಹಾಗೆಯೇ ಇಲ್ಲೊಂದು ಮುದ್ದು ಕುವರಿ ಇಂತಹ ಪರಿಪಾಲನೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಪಾತ್ರವಾಗಿದೆ.
ಯೆಸ..ಹೀಗೆ ತೊದಲು ನುಡಿಯಲ್ಲಿ ಕೇಳಿದ್ದಕ್ಕೆಲ್ಲ ಉತ್ತರ ಕೊಡುತ್ತಿರುವ ಈ ಮುದ್ದು ಪುಟಾಣಿಯ ಹೆಸರು ಮೃದಿನಿ ಕೋಟ್ಯಾನ್. ಚಿಟ್ಟೆಯಂತೆ ಹಾರುವ ಈ ಮುದ್ದಾದ ಚಿನಕುರುಳಿಗೆ ಎರಡು ವರ್ಷ. ಈಕೆ ದೇಹದ 14 ಭಾಗಗಳನ್ನು ಗುರುತಿಸುವುದರ ಜತೆಗೆ, 6 ಪ್ರಾಣಿ, 7 ರಾಷ್ಟ್ರೀಯ ಚಿಹ್ನೆಗಳನ್ನು ನೆನಪಿಸಿಕೊಳ್ಳುವುದು, A-U ನಿಂದ ವರ್ಣಮಾಲೆಯ ಪತ್ರ ಮತ್ತು ಅವುಗಳ ಅನುಗುಣವಾದ ಪದಗಳು 6 ಬಣ್ಣಗಳು, 1ರಿಂದ10 ಸಂಖ್ಯೆಗಳನ್ನು ಎಣಿಸುವುದು, 3 ಪ್ರಾಸಗಳನ್ನು ಪಠಿಸುವುದರೊಂದಿಗೆ ಭಜನಾ ಗೀತೆಗಳನ್ನೂ ಹಾಡುತ್ತಾಳೆ. ಈ ಮೂಲಕ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಹೌದು...ಮೃದಿನಿ ಅವರ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಿಂದ ಪ್ರಮಾಣಪತ್ರ ಮತ್ತು ಪದಕ ಲಭಿಸಿದೆ.
ಪಬ್ಲಿಕ್ ನೆಕ್ಟ್ಸ್ ಜೊತೆ ಮಾಹಿತಿ ಹಂಚಿಕೊಂಡ ಮೃದಿನಿ ತಾಯಿ ನಿರೀಕ್ಷಾ ಧೀರಜ್, ಮೃದಿನಿಗೆ ಚಿಕ್ಕಂದಿನಿಂದಲೂ ಬಹಳನೇ ಸೂಕ್ಷ್ಮ ಸ್ವಭಾವ. 2 ತಿಂಗಳ ಮಗು ಅಮ್ಮ-ಅಪ್ಪ ಹೇಳುವ ಮೂಲಕ ಮುಂದುವರೆದ ಮಗು ಇದೀಗ ಶ್ಲೋಕ, ವರ್ಣಮಾಲೆ, ಪ್ರಾಣಿ-ಪಕ್ಷಿಗಳನ್ನು ಗುರುತಿಸುತ್ತಾಳೆ. ತಂದೆ ಮತ್ತು ಅಜ್ಜಿಯ ಮಾರ್ಗದರ್ಶನ ಈಕೆಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆಂದರೆ ಸಂತೋಷವಾಗುತ್ತಿದೆ ಎನ್ನುತ್ತಾರೆ.
ಮುದ್ದು ಪುಟಾಣಿ ಮೃದನಿಯ ಸಾಧನೆಯ ಶಿಖರ ಇನ್ನಷ್ಟು ಎತ್ತರಕ್ಕೇರಲಿ.. ಈ ಛಲ ಇನ್ನಷ್ಟು ಬೆಳೆದು ಕೀರ್ತಿ ಸಾಧಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ.
ವೈಶಾಲಿ ಶೆಟ್ಟಿ, ಪೂವಾಳ
PublicNext
03/03/2022 02:37 pm