ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಾಥಮಿಕ ಶಾಲಾ ಪಠ್ಯದ ಪದ್ಯಗಳಿಗೆ ರಾಗ ಸಂಯೋಜಿಸಿ ಹೆಜ್ಜೆ ಹಾಕಿದ ಶಿಕ್ಷಕಿ: ಜಾಲತಾಣಗಳಲ್ಲಿ ವೀಡಿಯೋ ಸದ್ದು

ಮಂಗಳೂರು: ಕೊರೊನಾದಿಂದ ಮಕ್ಕಳು ಮನೆಯಲ್ಲಿಯೇ ಇರಬೇಕಾದ ಸಂಕಷ್ಟದ ಸ್ಥಿತಿಯ ಈ ಕಾಲಘಟ್ಟದಲ್ಲಿ ಮಂಗಳೂರಿನ ಶಿಕ್ಷಕಿಯೋರ್ವರು ಪ್ರಾಥಮಿಕ ಶಾಲೆಯ ಪಠ್ಯದ ಪದ್ಯಗಳಿಗೆ ಸ್ವತಃ ಸಂಗೀತ ಸಂಯೋಜಿಸಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ‌ ಮಕ್ಕಳ ಕಲಿಕೆಗೆ ಹುರುಪು ತುಂಬಿದ್ದಾರೆ.

ನಗರದ ಕೊಡಿಯಾಲಬೈಲ್ ನಲ್ಲಿರುವ ನಳಂದ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಮಾಧ್ಯಮದ ಶಿಕ್ಷಕಿ ಈ ರೀತಿಯ ಪ್ರಯೋಗವನ್ನು ಮಾಡಿ ಯಶಸ್ಸು ಗಳಿಸಿದವರು. ಅವರ ಪ್ರಯತ್ನದಿಂದಾಗಿ 3 ರಿಂದ 6ನೇ ತರಗತಿವರೆಗಿನ ಕನ್ನಡ ಪಾಠದ ಏಳು ಪದ್ಯಗಳು 'ಕಲಿ ನಲಿ ಆಡು: ವಾರಕ್ಕೊಂದು ಹಾಡು' ಶೀರ್ಷಿಕೆಯ ಮೂಲಕ ಯೂಟ್ಯೂಬ್ ಗೆ ಅಪ್ಲೋಡ್ ಆಗಿದೆ. ಸಾಕಷ್ಟು ಮಕ್ಕಳು ಇದರ ಸದುಪಯೋಗ ಪಡೆದಿದ್ದು, ಈ ಬಗ್ಗೆ ಮಕ್ಕಳ ಹೆತ್ತವರು ಶಿಕ್ಷಕಿ ಮಂಜುಳಾ ಜನಾರ್ದನ ಅವರು ಕಾರ್ಯಕ್ಕೆ ಬೆನ್ನು ತಟ್ಟಿರೋದೇ ಸಾಕ್ಷಿ. ಮಂಜುಳಾ ಅವರೊಂದಿಗೆ ಇತರ ಮೂವರು ಶಿಕ್ಷಕಿಯರು, ಏಳು ಮಂದಿ ವಿದ್ಯಾರ್ಥಿಗಳು ಕೈಜೋಡಿಸಿ ಚಂದವಾಗಿ ಹೆಜ್ಜೆ ಹಾಕಿದ್ದಾರೆ.

ಇನ್ನು ಐದು ಹಾಡುಗಳು ತಯಾರಾಗಿದ್ದು ವಾರಕ್ಕೊಂದರಂತೆ ಮೂಂದಿನ‌ ಐದು ವಾರಗಳಲ್ಲಿ ಯೂಟ್ಯೂಬ್​​​ಗೆ ಅಪ್ಲೋಡ್ ಆಗಲಿವೆ. ಈ ಮೂಲಕ ವಿದ್ಯಾರ್ಥಿಗಳು ಪಾಠವನ್ನು ಸುಲಭವಾಗಿ ಗ್ರಹಿಸಲು ಸಹಕಾರಿಯಾಗಿದೆ. ಈ ವೀಡಿಯೋವನ್ನು ದೇವಿಪ್ರಕಾಶ್ ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದು, ನೀನಾಸಂನ ಮೆಹಬೂಬ್ ಸಹಕಾರ ನೀಡಿದ್ದಾರೆ. ಕಲಿ-ನಲಿ-ಆಡುವನ್ನು ನೋಡಿ ಮೆಚ್ಚಿರುವ ಅಗರಿ ಸಂಸ್ಥೆಯ ಅಗರಿ ರಾಘವೇಂದ್ರ ಅವರು ವೀಡಿಯೋ ಚಿತ್ರೀಕರಣದ ವೆಚ್ಚವನ್ನು ಭರಿಸಿದ್ದು, ಮುಂದಿನ‌ ವೀಡಿಯೋ ಚಿತ್ರೀಕರಣಕ್ಕೆ ಪ್ರಾಯೋಜಕರಾಗಿ ಸ್ವತಃ ನಳಂದ ಸಂಸ್ಥೆಯೇ ಮುಂದೆ ಬಂದಿದೆ ಎಂದು ಮಂಜುಳಾ ಜನಾರ್ದನ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

05/09/2021 02:59 pm

Cinque Terre

11.12 K

Cinque Terre

1

ಸಂಬಂಧಿತ ಸುದ್ದಿ