ಉಡುಪಿ: ಪಾಠ-ಪ್ರವಚನದಲ್ಲಿ ತೊಡಗಿರುವಾಗ ಕೂಗಳತೆ ದೂರದಲ್ಲಿ ಓಡುವ ರೈಲಿನ ಸದ್ದನ್ನು ಆಲಿಸುವ ಈ ಶಾಲಾ ಮಕ್ಕಳಿಗೆ ಇನ್ಮುಂದೆ ಶಾಲೆಯಲ್ಲೇ ಹೊಸ ಅನುಭವವಾಗಲಿದೆ. ತಾವೇ ರೈಲಿನೊಳಗೇ ಕುಳಿತು ಪಾಠ ಕೇಳುವಂತೆ, ರೈಲಿನಲ್ಲಿಯೇ ಓಡಾಡುವಂತೆ ಕಲ್ಪನೆ ಮೂಡಿಸುವ ವಾತಾವರಣ ರೂಪಿಸಲಾಗಿದ್ದು, ಕಲಿಕೆಗೆ ನವೋತ್ಸಾಹ ತುಂಬುವ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಪ್ರಯತ್ನವೊಂದು ನಾಗೂರಿನಲ್ಲಿ ಬೆಳಕಿಗೆ ಬಂದಿದೆ.
ನಾಗೂರು-ಕಂಬದಕೋಣೆ ರಾಷ್ಟ್ರೀಯ ಹೆದ್ದಾರಿ ಮಗ್ಗುಲಿನಲ್ಲಿರುವ ನಾಗೂರು ಸರಕಾರಿ ಹಿ.ಪ್ರಾ. ಶಾಲಾ ಕಟ್ಟಡವನ್ನು ರೈಲಿನಂತೆ ವಿನ್ಯಾಸಗೊಳಿಸಲಾಗಿದೆ. ತರಗತಿಯ ಬಾಗಿಲು ತೆರೆದು ಹೊರಬರುವಾಗಲೆಲ್ಲ ರೈಲಿನಿಂದ ಇಳಿಯುವಂತೆ ಮಕ್ಕಳು ಸಂಭ್ರಮಿಸುತ್ತಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಬೇಕೆಂಬ ಮಹತ್ವಾಕಾಂಕ್ಷೆಯಿಂದ ಇಲ್ಲಿನ ಶಿಕ್ಷ ಕರು ಹೊಸ ಕನಸು ಬಿತ್ತಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಐಡಿಯಾ: ನಾಗೂರು ಸರಕಾರಿ ಹಿ.ಪ್ರಾ. ಶಾಲೆ 1973ರಲ್ಲಿ ಸ್ಥಾಪನೆಗೊಂಡಿದ್ದು, ಆರಂಭದ ದಿನಗಳಲ್ಲಿ ಈ ಶಾಲೆಯಲ್ಲಿ 200ರಿಂದ 300ರಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಇದೀಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು
ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸಂಖ್ಯೆ ವರ್ಧನೆಗೆ ಟೊಂಕ ಕಟ್ಟಿದ ಶಿಕ್ಷ ಕರು ನಡೆಸಿದ ವಿಶಿಷ್ಟ ಚಿಂತನೆಯ ಮೂರ್ತರೂಪವೇ ರೈಲು ವಿನ್ಯಾಸದ ಶಾಲಾ ಕಟ್ಟಡ.
ನಾಗೂರು ಶಾಲೆಯಲ್ಲಿ 1ರಿಂದ 7ನೇ ತರಗತಿಗಳಿದ್ದು, ಇಲ್ಲಿ ಉರ್ದು ಭಾಷಾ ಶಿಕ್ಷ ಕಿ ಸೇರಿದಂತೆ ಮೂವರು ಶಿಕ್ಷ ಕರಿದ್ದಾರೆ. ಇ-ಲರ್ನಿಂಗ್, ಎಜುಸ್ಯಾಟ್, ಪ್ರತೀ ತರಗತಿಯಲ್ಲೂ ಓದುವ ಮೂಲೆ, ದಾನಿಗಳಿಂದ ಶುದ್ಧ ಕುಡಿಯುವ ನೀರು ಘಟಕ ಸೇರಿದಂತೆ ಹಲವಾರು ಸೌಕರ್ಯಗಳಿವೆ. ಆದರೆ ಮಕ್ಕಳ ಕೊರತೆಯೇ ಚಿಂತೆಯಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದ ಶಿಕ್ಷ ಕರು ಕೇರಳದ ಶಾಲೆಯ ಕಟ್ಟಡವನ್ನು ರೈಲು ವಿನ್ಯಾಸದಿಂದ ರೂಪಿಸಿ, ಮಕ್ಕಳನ್ನು ಸೆಳೆಯುವಲ್ಲಿ ಸಫಲರಾದ ಸಂಗತಿಯಿಂದ ಪ್ರೇರಣೆ ಪಡೆದು ತಾವೂ ಯಾಕೆ ಈ ಪ್ರಯತ್ನ ಮಾಡಬಾರದು ಎಂದು ಯೋಚಿಸಿ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಸಾಕಷ್ಟು ಸೌಲಭ್ಯ ಹೊಂದಿದ್ದರೂ ಮಕ್ಕಳ ಸಂಖ್ಯೆ ಕುಂಠಿತಗೊಂಡಿದ್ದರ ಬಗ್ಗೆ ಶಿಕ್ಷ ಕರು, ಎಸ್‌ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿ ಸಂಘ ಚರ್ಚಿಸಿದ್ದಾರೆ. ಏತನ್ಮಧ್ಯೆ ಕೇರಳದ ಶಾಲೆಯೊಂದರ ಕಟ್ಟಡವನ್ನು ರೈಲು ವಿನ್ಯಾಸದಿಂದ ಆಕರ್ಷಕಗೊಳಿಸಿದ್ದು, ಮಕ್ಕಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಯಶಸ್ವಿಯಾಗಿದ್ದರ ಬಗ್ಗೆ ಅಂತರ್ಜಾಲದಲ್ಲಿ ಲಭಿಸಿದ ಮಾಹಿತಿಯಿಂದ ಸ್ಫೂರ್ತಿ ಸಿಕ್ಕಿದೆ. 4 ಕೋಣೆಗಳನ್ನೊಳಗೊಂಡ ನಾಗೂರು ಶಾಲಾ ಕಟ್ಟಡ ಇಂಗ್ಲಿಷ್‌ನ ಎಲ್ ಅಕ್ಷ ರದ ಆಕಾರದಲ್ಲಿದ್ದು, ರೈಲು ಮಾದರಿ ವಿನ್ಯಾಸ ಮೂಡಿಸಲು ಅನುಕೂಲವಾಗಿದೆ. ಉಪ್ಪುಂದದ ಚಿತ್ರಕಲಾ ಶಿಕ್ಷ ಕ ಬಡಿಗೇರ್ ಮತ್ತಿತರ ನುರಿತ ಶಿಕ್ಷ ಕರು ಸಹಕರಿಸಿದ್ದಾರೆ.
Kshetra Samachara
19/02/2021 05:10 pm