ಬೈಂದೂರು: ದೈಹಿಕ ಸ್ವಾಧೀನ ಕಳಕೊಂಡ ಬಾಲಕಿಯ ಸಾಧನೆಗೆ ಯಾವುದೂ ಅಡ್ಡಿಯಾಗಿಲ್ಲ. ತಾಯಿಯ ಮಡಿಲಲ್ಲಿ ಕೂತು ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಆಶುಭಾಷಣ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದ ಕುಂದಾಪುರದ ಮಗು ಶ್ರೀರಕ್ಷ.
ಶ್ರೀಧರ್ ಹಾಗೂ ಗೀತ ಪುತ್ರಿ ಶ್ರೀರಕ್ಷಾ ನಾಡಾ ಗ್ರಾಮದ ಕಡ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ವಿದ್ಯಾರ್ಥಿನಿ ಶ್ರೀರಕ್ಷಾ ಹುಟ್ಟುವಾಗಲೇ ಎರಡು ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ರು. ಆದರೆ ಕಲಿಕೆಯಲ್ಲಿ ಮಾತ್ರ ಆಕೆಗೆ ಅಪಾರ ಆಸಕ್ತಿ. ಇಡೀ ತರಗತಿಗೆ ಶ್ರೀರಕ್ಷನೇ ಮೊದಲ ಸ್ಥಾನ.
ಇದನ್ನು ಗಮನಿಸಿದ ಕಡಿಕೆ ನಾಡದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ನೀಡಿದ ಮಾನಸಿಕ ಸ್ಥೈರ್ಯ ದಿಂದಾಗಿ ದಿನವು ರಿಕ್ಷಾದಲ್ಲಿ ಆಕೆಯನ್ನು ಕರೆತರುವ ವ್ಯವಸ್ಥೆ ಮಾಡಿದ್ದರು. ಸಹಪಾಠಿಗಳೇ ಶಾಲೆಯಲ್ಲಿ ಈಕೆಗೆ ನೆರವಾಗುತ್ತಾರೆ . ಕ್ವಿಜ್, ಭಾಷಣ, ಹಾಡು ಹೀಗೆ ಶ್ರೀರಕ್ಷಾ ಎಲ್ಲದರಲ್ಲೂ ಮುಂದು. ಬದುಕಿನ ಸವಾಲನ್ನು ಎದುರಿಸಿ ಶ್ರೀರಕ್ಷಾ ಸಾಧನೆ ಈಗ ಎಲ್ಲರ ಖುಷಿಗೆ, ಸ್ಫೂರ್ತಿಗೆ ಕಾರಣವಾಗಿದೆ. ಮುಂದಿನ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮುಂದಿನ ದಿನಗಳಲ್ಲಿ ಇನಷ್ಟು ಅವಕಾಶಗಳು ಅರಸಿ ಬರಲಿ ಬಾಳಿಗೆ ಸ್ಫೂರ್ತಿಯಾಗುವ ಹಾಗೆ ಬದುಕಲಿ ಎನ್ನುವುದೇ ನಮ್ಮ ಆಶಯ ಎಂದು ಶಾಲಾ ಮುಖ್ಯೋಪಧ್ಯಾಯರಾದ ನಾಗರಾಜ್ ಶೆಟ್ಟಿಯವರು ತಿಳಿಸಿದ್ದಾರೆ.
Kshetra Samachara
22/09/2022 05:28 pm