ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್: ತಂದೆಯಿಂದಲೇ ಮಗನ ಅಪಹರಣ: ಏಕಾಏಕಿ ನಾಪತ್ತೆಯಾದ ಮಗು ಕೊನೆಗೂ ಪತ್ತೆ

ಮುಲ್ಕಿ: ಇಲ್ಲಿಗೆ ಸಮೀಪದ ಕಾರ್ನಾಡು ಶಾಲೆಗೆ ಕಲಿಯಲು ಬರುತ್ತಿದ್ದ ನಾಲ್ಕು ವರ್ಷದ ಮಗು ಏಕಾಏಕಿ ಬೆಳಿಗ್ಗೆ ನಾಪತ್ತೆಯಾಗಿ ಸ್ಥಳದಲ್ಲಿ ಹಾಗೂ ಶಾಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಪೊಲೀಸ್ ತನಿಖೆಯಿಂದ ಕೆರೆಕಾಡು ಬಳಿ ಮಗುವಿನ ತಂದೆಯ ಮಿತ್ರನ ಮನೆಯಲ್ಲಿ ಮಗು ಪತ್ತೆಯಾಗಿದೆ.

ಮುಲ್ಕಿ ಸಮೀಪದ ಹೆಜಮಾಡಿಯಿಂದ ಪ್ರತಿನಿತ್ಯ ಒಂಬತ್ತು ಗಂಟೆಗೆ ಕಾರ್ನಾಡ್ ಶಾಲೆಗೆ ಬಸ್ಸಿನಲ್ಲಿ ಬರುತ್ತಿದ್ದ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಒಂಬತ್ತು ವರ್ಷದ ಮಗು ಶಾಲೆ ಎದುರು ಭಾಗದಲ್ಲಿ ಬಸ್ಸಿನಲ್ಲಿ ಇಳಿದಿದೆ. ಕೂಡಲೇ ಅಲ್ಲಿಗೆ ಆಟೋದಲ್ಲಿ ಆಗಮಿಸಿದ ಮಗುವಿನ ತಂದೆ ಹರೀಶ್ ಎಂಬಾತ ಮಗುವನ್ನು ಆಟೋದಲ್ಲಿ ಕುಳ್ಳಿರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮತ್ತೆ ಅದೇ ಮಗುವಿನ ತಂದೆ ಆರೋಪಿ ಹರೀಶ್ ಶಾಲೆಗೆ ಬಂದು ತನ್ನ ಮಗು ಎಲ್ಲಿ ಎಂದು ನಾಟಕ ಸೃಷ್ಟಿಸಿ ಮುಲ್ಕಿ ಠಾಣೆಗೆ ದೂರು ನೀಡಲು ಹೋಗಿದ್ದಾನೆ

ಇತ್ತ ಮಗು ಶಾಲೆಯಲ್ಲಿ ನಾಪತ್ತೆಯಾದ ಬಗ್ಗೆ ಶಾಲೆಯಲ್ಲಿ ಹಾಗೂ ಕಾರ್ನಾಡು ಪೇಟೆಯಲ್ಲಿ ಗೊಂದಲ ಉಂಟಾಗಿ ಮಗುವಿನ ಆಪರಣದ ಬಗ್ಗೆ ವದಂತಿಗಳು ಸೃಷ್ಟಿಯಾಗಿತ್ತು. ಕೂಡಲೇ ಸ್ಥಳಕ್ಕೆ ಮುಲ್ಕಿ ನ.ಪಂ.ಸದಸ್ಯ ಪುತ್ತುಭಾವ ಹಾಗೂ ಮುಲ್ಕಿ ಪೊಲೀಸರು ಆಗಮಿಸಿ ಶಾಲೆಯ ಬಳಿಯ ಕೇಶವ ಸುವರ್ಣ ಎಂಬುವರ ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಆಗ ಮಗುವಿನ ತಂದೆ ಆರೋಪಿ ಹರೀಶ ಮಗುವನ್ನು ವಾಪಸ್ ಕರೆದುಕೊಂಡು ಹೋಗುವ ದೃಶ್ಯ ಕಂಡು ಬಂದು ಆತನ ಕೃತ್ಯ ಬಯಲಾಗಿದೆ

ಕೂಡಲೇ ಸ್ಥಳಕ್ಕೆ ಮಗುವಿನ ತಂದೆ ಆರೋಪಿ ಹರೀಶ್ ನನ್ನು ಕರೆಯಿಸಿ ಮಗು ಎಲ್ಲಿ ಎಂದು ಪ್ರಶ್ನಿಸಿದರೂ ಆತ ಬಾಯಿ ಬಿಡದೆ ಮತ್ತೆ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿ ತನಿಖೆ ನಡೆಸಿದಾಗ ಮಗುವಿಗೆ ಅನಾರೋಗ್ಯ ಉಂಟಾಗಿದ್ದು ಕೆರೆಕಾಡು ಎಂಬಲ್ಲಿರುವ ತನ್ನ ಮಿತ್ರನ ಮನೆಯಲ್ಲಿ ಮಗುವಿದೆ ಎಂಬ ಮಾಹಿತಿಯ ಅನ್ವಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಮಗುವಿನ ತಂದೆ ಹರೀಶ್ ಯಾಕಾಗಿ ಈ ರೀತಿ ನಾಟಕ ಆಡಿದ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.

Edited By : Somashekar
Kshetra Samachara

Kshetra Samachara

16/09/2022 03:18 pm

Cinque Terre

10.62 K

Cinque Terre

3

ಸಂಬಂಧಿತ ಸುದ್ದಿ