ವಿಶೇಷ ಸ್ಟೋರಿ...
ಉಡುಪಿ: ಸಭೆ ಸಮಾರಂಭ ಮೆರವಣಿಗೆ ಉತ್ಸವ ಯಾವುದೆ ಇರಲಿ, ಅಲ್ಲಿ ಮುಖ್ಯವೆನಿಸಿಕೊಳ್ಳುವುದು ಕುಡಿಯುವ ನೀರು. ದಣಿದವರಿಗೆ ಒಂದಿಷ್ಟು ನೆಮ್ಮದಿ ನೀಡಿ ಆಯಾಸ ಪರಿಹಾರ ನೀಡುವುದೇ ಈ ನೀರು. ಇದೇ ಕುಡಿಯುವ ನೀರನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀಡುವ ಓರ್ವ ಮಹಿಳೆ ಜಿಲ್ಲೆಯ ಸಾಂಸ್ಕೃತಿ, ಧಾರ್ಮಿಕ ಬಹುತೇಕ ಎಲ್ಲಾ ಕಾರ್ಯಕ್ರಮದಲ್ಲೂ ಕಾಣಸಿಗುತ್ತಾರೆ. ಬಾಯಾರಿಕೆ ಅಂತಾ ಹೇಳುವಷ್ಟರಲ್ಲಿ ಇವರು ನೀರು ತಂದು ಕೊಡ್ತಾರೆ. ದಣಿದವರ ಪಾಲಿಗೆ ಸಂಜೀವಿನಿ ಇವರು ದಾಹ ಅಂತಾ ಗಂಟಲು ಒಣಗುತ್ತಿರುವಾಗಲೇ ಲೋಟದಲ್ಲಿ ನೀರು ತಂದು ಎದುರು ಬರುತ್ತಾರೆ. ಉಡುಪಿ ಜಿಲ್ಲೆಯಲ್ಲಿ ದಣಿದವರ ಪಾಲಿನ ನೀರಮ್ಮ ಅಂತಾ ಕರೆಸಿಕೊಂಡವರು ಇವರು ಯಾರು ಅಂತಾ ಗೊತ್ತಾಗಬೇಕೇ ಈ ಸ್ಟೋರಿ ನೋಡಿ..
ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು ಸಮಾಜ ಸೇವೇಯೇ ಉಸಿರಾಗಿರಿಸಿಕೊಂಡಿರೋ ಇವರ ಹೆಸರು ಪದ್ಮಮ್ಮ. ಉಡುಪಿ ಜಿಲ್ಲೆಯ ಕುಂದಾಪುರದ ಹೊಧ್ರೋಳಿ ಯವರಾದ ಇವರು ನೀರಮ್ಮ ಅಂತಾ ಖ್ಯಾತಿ ಪಡೆದಿದ್ದಾರೆ. ದಣಿವರಿಯದ ಸಮಾಜ ಸೇವೆಯನ್ನು ಮಾಡಿ ಜೀವನದ ಸಾರ್ಥಕತೆಯನ್ನು ಕಂಡು ಕೊಂಡಿರೋ ಅಪರೂಪದ ಮಹಿಳೆ.
೧೯೯೫ ರಲ್ಲಿ ಕುಂದಾಪುರದಲ್ಲಿ ಅಪರೂಪದ ನಾಗಮಂಡಲವಾದ ಸಂದರ್ಭದಲ್ಲಿ ಸೇರಿದ್ದ ಲPಂತರ ಮಂದಿಯ ಬಾಯಾರಿಕೆ ಹೋಗಲಾಡಿಸಿ ಬೇಷ್ ಅನಿಸಿಕೊಂಡಿದ್ದರು. ಇದೇ ಪ್ರೇರಣೆಯೇ ಇವರಿಗೆ ನಿರಂತರವಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀರ್ ಪದ್ಮಮ್ಮ ಎಂಬ ಖ್ಯಾತ ನಾಮಧೇಯಕ್ಕೆ ಕಾರಣವಾಯ್ತು.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
02/12/2020 01:39 pm