ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ :ಕುಗ್ರಾಮದ ಸಾಂತಜ್ಜಿಗೆ ಸೂರು ಕಟ್ಟಿಕೊಟ್ಟ ಉಮೇಶ್ ಶೆಟ್ಟಿ !

ವರದಿ : ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

ಉಡುಪಿ : ಉಡುಪಿ ಜಿಲ್ಲೆಯ ಶಂಕರನಾರಾಯಣದ ಕುಳ್ಳುಂಜೆ ಎನ್ನುವ ಕುಗ್ರಾಮದ ಮಾವಿನಕೊಡ್ಲು ಬಳಿಯ ಕೋವಿನಗುಡ್ಡೆ ಎನ್ನುವಲ್ಲಿ ಸಾಂತು ಅಜ್ಜಿಗೆ ಇದೀಗ ಸುಂದರವಾದ ಮನೆಯೊಂದನ್ನು ಕಟ್ಟಿಕೊಡಲಾಗಿದೆ. ದನದ ಕೊಟ್ಟಿಗೆಯಲ್ಲಿ ಪ್ರಾಣಿಗಳಿಗಿಂತಲೂ ಕೀಳಾದ ಜೀವನ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಶಾಂತ ಅಜ್ಜಿಗೆ ಇದೀಗ ಸುಂದರ ಗೂಡಿನ ಬೆಳಕು ನೀಡಿದವರು ಉಮೇಶ್ ಶೆಟ್ಟಿ ಕಲ್ಲಗದ್ದೆ. ನಿರೀಕ್ಷೆಯೂ ಮಾಡದ ಸುಸಜ್ಜಿತವಾದ, ಸುಂದರವಾದ ಮನೆ ಸಿಕ್ಕಿದೆ. ಉಮೇಶ್ ಶೆಟ್ಟಿ ನೇತೃತ್ವದಲ್ಲಿ ಹಾಗೂ ಅವರ ತಂಡದ ವತಿಯಿಂದ ಸುಂದರವಾದ ಮನೆಯ ಕಲ್ಪಿಸಿಕೊಳ್ಳಲಾಗಿದೆ. ಸಾಂತಜ್ಜಿಯ ಮನೆಯ ಗ್ರಹ ಪ್ರವೇಶ ಅದ್ದೂರಿಯಾಗಿ ನಡೆದಿದ್ದು ಗಣ್ಯಾತಿಗಣ್ಯ ರಿಂದ ಉಡುಗೊರೆ ಹರಿದುಬಂದಿದೆ.

ಉಮೇಶ್ ಶೆಟ್ಟಿ ಕಲ್ಗದ್ದೆ ಸಾಂತಜ್ಜಿ ಮನೆ ನಿರ್ಮಾಣ ಮಾಡಲು ಶುರುಮಾಡಿದಾಗ ಒಂದಿಷ್ಟು ಒಂದಿಷ್ಟು ಪರ ವಿರೋಧಗಳು ವ್ಯಕ್ತವಾಗಿತ್ತು, ಬಡತನದ ಬೇಗೆಯಲ್ಲಿ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಅಜ್ಜಿಗೆ ಸೂರಣ್ಣ ಕಲ್ಪಿಸಿಕೊಡಲು ಹೊರಟ ಉಮೇಶ್ ಶೆಟ್ಟಿಗೆ ರಾಜಕೀಯವಾಗಿ ಬಣ್ಣ ಬಳಿಯಲು ಪ್ರಾರಂಭಿಸಿದರು, ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದ ಶೆಟ್ರು ತಾನು ಹಿಡಿದ ಕೆಲಸವನ್ನು ಪೂರ್ಣಗೊಳಿಸಿ ಅಜ್ಜಿ ಮನೆಯ ಗೃಹಪ್ರವೇಶ ಮಾಡಿಬಿಟ್ಟರು.

ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೂತನ ಮನೆಯ ಒಳಗೆ ದೀಪ ಪ್ರಜ್ವಲನೆಗೈದರು. ವಯೋವೃದ್ದೆ ಸಾಂತಜ್ಜಿಯನ್ನು ಶಾಸಕರು ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಮಾನವೀಯ ವ್ಯವಸ್ಥೆ. ಪರಮಾತ್ಮನ ಪೂರ್ಣಾನುಗ್ರಹಕ್ಕೆ ಪಾತ್ರವಾಗುವ ವ್ಯವಸ್ಥೆ ಇದು. ಉಮೇಶ ಶೆಟ್ಟರು ಅವರ ಸ್ನೇಹಿತರ ಪರಿಶ್ರಮವನ್ನು ಈ ಕುಟುಂಬ ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು.

Edited By : Nagesh Gaonkar
Kshetra Samachara

Kshetra Samachara

24/11/2020 04:03 pm

Cinque Terre

15.28 K

Cinque Terre

2