ಪಡುಕರೆ: ಉಡುಪಿಯ ಪಡುಕರೆ, ಮಟ್ಟು ಭಾಗದಲ್ಲಿ ಪ್ರತಿ ರಾತ್ರಿ ಕಡಲು ಕಡು ನೀಲಿ ಬಣ್ಣದಲ್ಲಿ ಹೊಳೆಯುತ್ತಿರುವುದು ಕಂಡು ಬಂದಿದೆ.
ತೀರಕ್ಕೆ ಅಪ್ಪಲಿಸುವ ಅಲೆಗಳು ನೀಲಿ ಬಣ್ಣದಲ್ಲಿ ಪ್ರಕಾಶಿಸುತ್ತಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.
ಇದೇನು ಆಶ್ಚರ್ಯ ಅಂತೀರಾ? ಈ ಪ್ರಕ್ರಿಯೆಗೆ ಜೀವಶಾಸ್ತ್ರದಲ್ಲಿ ಬಯೋಲುಮಿನೆಸೆನ್ಸ್ ಎಂದು ಹೆಸರು. ಸಮುದ್ರದಲ್ಲಿ ಹೇರಳವಾಗಿರುವ ಒಂದು ಪ್ರಕಾರದ ಏಕಕೋಶ ಜೀವಿಗಳು ಸೂಸುವ ಬೆಳಕೇ ಈ ಪ್ರಕ್ರಿಯೆಗೆ ಕಾರಣ.
ಅಕ್ಟೋಬರ್ ಮೊದಲ ವಾರದಲ್ಲಿ ಪಡುಕರೆ ಸಮುದ್ರ ತೀರದಲ್ಲಿ ಕಂಡು ಬಂದ ದೃಶ್ಯವನ್ನು ಉಡುಪಿಯವರೇ ಆದ ಮಂಜುನಾಥ್ ಕಾಮತ್ ಎಂಬವರು ಗುರುತಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹಂಚಿಕೊಂಡಿದ್ದರು.
ನಂತರದ ದಿನಗಳಲ್ಲಿ ಈ ಪ್ರಕ್ರಿಯೆ ಪುನರಾವರ್ತನೆ ಆಗ ತೊಡಗಿದಾಗ ಜನರಲ್ಲಿ ಇದೀಗ ಇದರ ಕುರಿತಾಗಿ ಕುತೂಹಲ ಕೂಡ ಹೆಚ್ಚಾಗುತ್ತಿದೆ.
ಪ್ರತಿದಿನ ರಾತ್ರಿ ಗೋಚರಿಸುವ ಈ ಬಯೋಲುಮಿನೆಸೆನ್ಸ್ ಪ್ರಕ್ರಿಯೆ ಕೆಲವೊಂದು ಸಂದರ್ಭ ಪ್ರಖರವಾಗಿ ಕಾಣಸಿಗುತ್ತದೆ. ಈ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಮಂದಿ ಉತ್ಸಾಹಿಗಳು ಸಮುದ್ರ ತೀರಕ್ಕೆ ಬಂದು ಫೋಟೊ, ವೀಡಿಯೊ ಮಾಡಿ ಕಣ್ತುಂಬಿಕೊಳ್ಳುತಿದ್ದಾರೆ. ಎರಡು ವರ್ಷಗಳ ಹಿಂದೆ ಉಡುಪಿಯ ಮಟ್ಟು ಸಮುದ್ರ ತೀರದಲ್ಲಿ ಕೂಡ ಇಂತಹ ಪ್ರಕ್ರಿಯೆ ಕಂಡು ಬಂದಿದ್ದವು.
ಆದರೆ ಈಗ ಕರ್ನಾಟಕದ ಪಡುಕರೆ, ಸುರತ್ಕಲ್ ಸೇರಿದಂತೆ ಕಾರವಾರ, ಕುಮಟಾ ಗಳಲ್ಲಿ ಏಕಕಾಲದಲ್ಲಿ ಈ ಪ್ರಕ್ರಿಯೆ ಕಂಡು ಬರುತ್ತಿವೆ.
ಎನ್ನುತ್ತಾರೆ ತಜ್ಞರು.
Kshetra Samachara
24/11/2020 09:09 am