ಕುಂದಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಳಮದ್ದಳೆ ಘಟಕ ನೈಕಂಬ್ಳಿ ಮತ್ತು ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ವತಿಯಿಂದ ದಿವಂಗತ ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ ಸಭೆ ಜರುಗಿತು.
ಯಕ್ಷ ನುಡಿಸಿರಿ ಬಳಗದ ರೂವಾರಿಗಳಾದ ಡಾ.ಜಗದೀಶ ಶೆಟ್ಟಿ ಸಿದ್ಧಾಪುರ, ಉಪನ್ಯಾಸಕಾರ ಶ್ರೀಕಾಂತ್ ರಾವ್ , ನಾಗರಾಜ್ ನೈಕಂಬ್ಳಿ , ಸಾಮಗರ ಸಂಚಾರಿ ಯಕ್ಷಗಾನ ಮಂಡಳಿ (ಸಂಯಮ) ತಂಡದ ಭಾಗವತರಾದ ಗಣೇಶ್ ಹೆಬ್ರಿ , ರವಿ ಸೂರಾಲು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸತೀಶ ಶೆಟ್ಟಿ ಮೂಡುಬಗೆ ನಿರೂಪಿಸಿದರು. ನಂತರ ಈ ಭಾಗದ ಯುವ ಹವ್ಯಾಸಿ ಅರ್ಥಧಾರಿಗಳಿಂದ ತಾಳಮದ್ದಳೆ ' ಶ್ರೀರಾಮ ಪಟ್ಟಾಭಿಷೇಕ' ಜರುಗಿತು.
Kshetra Samachara
16/11/2020 09:35 pm