ವರದಿ: ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್, ಉಡುಪಿ
ಉಡುಪಿ: ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ದೀಪಾವಳಿ ಸ್ವಲ್ಪ ಮಂಕಾಗಿದೆ ಎನ್ನಬಹುದು. ಜತೆಗೆ ಸರಕಾರ ಪಟಾಕಿ ನಿಷೇಧ, ಕಟ್ಟುನಿಟ್ಟಿನ ಕ್ರಮ ಅಂತೆಲ್ಲ ಕಾನೂನು ರೂಪಿಸಿ ಮತ್ತಷ್ಟು ಭಯ ಹುಟ್ಟಿಸಿದೆ. ಆದರೆ, ಪಟಾಕಿ ನಿಷೇಧ ಕುರಿತು ಪೈಪೋಟಿಯಲ್ಲಿ ಕಾನೂನು ರೂಪಿಸಿದ ಸರಕಾರ, ಚೀನಿ ವಸ್ತು ಮಾರಾಟ ವಿಷಯದಲ್ಲಿ ಎಡವಿದೆ.
ಪ್ರತಿವರ್ಷ ಕೂಡ ಭಾರತೀಯರ ಹಬ್ಬಕ್ಕೆ ಚೀನದ ವಸ್ತು ಸಿದ್ಧಗೊಂಡು ಮಾರುಕಟ್ಟೆ ಅಲಂಕರಿಸುತ್ತಲೇ ಇವೆ. ಇದರಿಂದ ಹಬ್ಬಗಳನ್ನೇ ನಂಬಿಕೊಂಡಿರುವ ಕರಕುಶಲ ಕರ್ಮಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕೊರೊನಾದಿಂದಾಗಿ ಬಸವಳಿದಿರುವ ಸ್ಥಳೀಯ ಗೂಡುದೀಪ ತಯಾರಕರು, ಈ ಚೀನಿ ಗೂಡುದೀಪದ ಹಾವಳಿಯಿಂದ ಮತ್ತಷ್ಟು ಕಂಗೆಡುವಂತಾಗಿದೆ.
"ದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿ ಅಥವಾ ಗೂಡುದೀಪ ಪ್ರಮುಖ ಆಕರ್ಷಣೆ. ಪ್ರತಿ ಮನೆಯಲ್ಲೂ ಈ ಗೂಡುದೀಪ ಬೆಳಗಿಸುವ ಸಂಪ್ರದಾಯವಿದೆ. ಬಿದಿರಿನ ಕಡ್ಡಿ ಬಳಸಿ ಗೂಡು ನಿರ್ಮಿಸಿ ಅದಕ್ಕೆ ಒಪ್ಪುವ ಬಣ್ಣದ ಕಾಗದ ಬಳಸಿಕೊಂಡು ಗೂಡುದೀಪ ಸಿದ್ಧವಾಗುತ್ತಿದ್ದವು. ಆದರೆ, ಈಗ ಈ ದೇಸಿ ಗೂಡುದೀಪ ಬದಲಿಗೆ ಚೀನಾ ಗೂಡುದೀಪ ಮಾರುಕಟ್ಟೆಗೆ ದಾಳಿ ಇಟ್ಟಿವೆ".
"ಚೈನಾ ಗೂಡುದೀಪ ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿದ್ದರೂ ಇದುವರೆಗೆ ಇದರ ನಿಷೇಧಕ್ಕೆ ಯಾವುದೇ ನಿಗದಿತ ಕಾನೂನು ರೂಪುಗೊಂಡಿಲ್ಲ. ಪ್ರತಿವರ್ಷ ಕೂಡ ಚೀನಾ ವಸ್ತುಗಳಿಗೆ ಸ್ಥಳೀಯ ಮಾರುಕಟ್ಟೆ ಯಾವುದೇ ಸಮಸ್ಯೆ ಇಲ್ಲದೆ ಸಿಗುತ್ತಿದೆ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ದೇಸಿ ವಸ್ತುಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು".
Kshetra Samachara
15/11/2020 09:14 pm