ಉಡುಪಿ: ಆಕೆ ಪ್ರಕೃತಿಯ ಕಣ್ಣು ಇಡೀ ಭೂಲೋಕವನ್ನೇ ನಾಚಿಸುವಂತಹ ಕಣ್ಣುಗಳ ನೋಟ ಮೈಸಿರಿ ಅವಳದ್ದು,ಅವಳ ಸಿಹಿ ಸಿಹಿ ನಗುವಿನ ಅಲೆಗಳನ್ನು ಸವಿಯಲು ಸಂದೇಶದ ಸಾಗರ ಪ್ರೀತಿಯನ್ನು ಹೊತ್ತು ಬರುತ್ತಿದೆ, ಆದರೆ ಆ ಪ್ರಕೃತಿ ಕಣ್ಣು ಕಾಣಿಸುವುದು ಹಲವಾರು ಪ್ರಕೃತಿಯನ್ನು ಪ್ರೀತಿಸುವ ಮನಸ್ಸುಗಳಿಗೆ,ಹೌದು ಇದೆನಪ್ಪ ಈ ರೀತಿ ಪೀಠಿಕೆ ಅಂತಿರಾ ಇದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಕೃತಿ ಮಡಿನಲ್ಲಿರುವ ಕ್ಷಿತಿಜ ಧಾಮದ ಬಗ್ಗೆ ಹೇಳಲು ಹೋರಟಿದ್ದೇವೆ,ಕರೊನಾ ಮಹಾಮಾರಿಯಿಂದ ಪ್ರವಾಸಿಗರಿಲ್ಲದೆ ಕಂಗ್ಗೆಟ್ಟ ಈ ಪ್ರವಾಸಿತಾಣಕ್ಕೆ ಇದೀಗ ಜನರು ಹರಿದು ಬರುತ್ತಿದ್ದಾರೆ.
ಸನ್ ಸೆಟ್ಟ್ ಮತ್ತು ಸನ್ ರೈಸ್ ಎರಡನ್ನು ಕಾಣುವ ಪ್ರದೇಶ ಇದಾಗಿದೆ, ಬೌಗೋಳಿಕವಾಗಿ ಸುಂದರವಾದ ಕ್ಷೇತ್ರವಾದ ಬೈಂದೂರು ತನ್ನ ಪ್ರಕೃತಿಯ ಸಿರಿಯನ್ನು ಜನರಿಗೆ ಊಣ ಬಡಿಸುತ್ತಿದೆ.ಈ ಪ್ರಕೃತಿ ಧಾಮದಲ್ಲಿ ನಿಂತು ನೋಡಿದರೆ ಇದುವೇ ಸ್ಬರ್ಗಲೋಕ ಎನ್ನುವ ಸಂತೋಷ ಮನಸ್ಸಿಗೆ ಆಗುತ್ತಾದೆ.ಎತ್ತರ ಪ್ರದೇಶದಿಂದ ಸೋಮೇಶ್ವರ ಬೀಚ್ ಕಡೆ ನೋಡಿದರೆ ಮನಸ್ಸಿನ ಕವನದ ಪುಟಗಳು ಗಾಳಿಯಲ್ಲಿ ತೆಲುತ್ತಾದೆ ಒಟ್ಟಾರೆ ಈ ಪ್ರದೇಶವನ್ನು ನೋಡದವರು ಒಮ್ಮೆ ಬಂದು ನೋಡಿ ಮನಸ್ಸಿಗೆ ಹಿತ ನೀಡುತ್ತಾದೆ ಇದು ಆ ಪ್ರಕೃತಿಯ ಕಣ್ಣು.
Kshetra Samachara
11/11/2020 09:21 pm