ಮಲ್ಪೆ: ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ( 71 ) ಕೋವಿಡ್ ಗೆ ಬಲಿಯಾಗಿದ್ದಾರೆ. ಸಾಮಗರು ಯಕ್ಷಗಾನದ ತೆಂಕು ಮತ್ತು ಬಡಗು ತಿಟ್ಟಿನಲ್ಲಿ ಖ್ಯಾತನಾಮರಾಗಿದ್ದವರು.
ಕುಂದಾಪುರ ತಾಲೂಕು ಕೋಟೇಶ್ವರದ ಸ್ವಗೃಹದಲ್ಲಿ ಅವರು ಇಂದು ಮೃತರಾಗಿದ್ದಾರೆ. ಅಲ್ಪ ಕಾಲಿಕ ಅಸೌಖ್ಯಕ್ಕೆ ಒಳಗಾಗಿದ್ದವರನ್ನು ಕೋವಿಡ್ ಸೋಂಕು ಕಾಡಿತ್ತು.
ಯಕ್ಷಗಾನ ರಂಗದ ತಾಳಮದ್ದಳೆ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಕಲಾವಿದರಾಗಿದ್ದ ಮಲ್ಪೆ ಸಾಮಗರು ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ವಾಕ್ಪಟುತ್ವದಿಂದ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದವರು.
ಸಾಮಗರ ನಿಧನಕ್ಕೆ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.
Kshetra Samachara
07/11/2020 09:24 am