ಉಡುಪಿ: ಕೆಲವು ಸಮಯಗಳಿಂದ ಉಡುಪಿ ನಗರದ ಹೃದಯ ಭಾಗದಲ್ಲಿರುವ ಬೋರ್ಡು ಹೈಸ್ಕೂಲಿನ ಹೊರ ಜಗುಲಿಯಲ್ಲಿ ಅಪರಿಚಿತ ಮಾನಸಿಕ ಅಸ್ವಸ್ಥ ವ್ಯಕ್ತಿ ನೆಲೆಗೊಂಡಿದ್ದಾನೆ.
ಸಿಕ್ಕಿದ್ದನ್ನು ತಿಂದುಂಡು ನಾಗರಿಕ ಸಮಾಜದಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದಾನೆ. ಬೋರ್ಡ್ ಹೈಸ್ಕೂಲು ವಠಾರದಲ್ಲೇ ಈತ ತನ್ನ ನಿತ್ಯಕರ್ಮ , ಶೌಚಾದಿ ನಡೆಸುತ್ತಿದ್ದು, ಕಸ ತ್ಯಾಜ್ಯ ತಂದು ರಾಶಿಗೊಳಿಸುತ್ತಿದ್ದಾನೆ. ಪರಿಣಾಮವಾಗಿ ಪರಿಸರದಲ್ಲಿ ಗಬ್ಬುವಾಸನೆ ಹರಡುತ್ತಿದೆ.
ತನ್ನ ಹೆಸರು ಮಂಜುನಾಥ್ ಶೆಣೈ (40) ಎಂದೂ, ತಾನು ಸದಾನಂದ ಶೆಣೈ ಎಂಬವರ ಮಗನಾಗಿದ್ದು, ಹೆಜಮಾಡಿ ಗುಂಡಿ ಇಲ್ಲಿಯ ನಿವಾಸಿಯೆಂದು ಹೇಳಿಕೊಂಡಿದ್ದಾನೆ. ಈತನನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನ ಅಗತ್ಯವಾಗಿ ಆಗಬೇಕಿದೆ.
ಈ ನಿಟ್ಟಿನಲ್ಲಿ ಸಂಬಂಧಿಕರು, ಸಮಾಜದ ಸಂಘ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉಡುಪಿಯ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ವಿನಂತಿಸಿದ್ದಾರೆ.
Kshetra Samachara
05/11/2020 09:46 pm