ಮೂಡುಬಿದಿರೆ: ಪ್ರಸ್ತುತ ಕೃಷಿಯನ್ನು ಅವಲಂಬಿಸಿ ಬದುಕುವವರ ಸಂಖ್ಯೆ ವಿರಳವಾಗಿದೆ. ಸಾಕಷ್ಟು ಕೃಷಿ, ಜಮೀನು, ಆಸ್ತಿಯನ್ನು ಹೊಂದಿದ್ದರೂ, ಸಹ ಇಂದು ಜಮೀನನ್ನು ಮಾರಾಟ ಮಾಡಿ ನಗರಕ್ಕೆ ಹೋಗಿ ನೌಕರಿ ಮಾಡುವವರೇ ಹೆಚ್ಚು. ಆದರೆ ಇಂತಹವರ ನಡುವೆ ಮೂಡುಬಿದಿರೆಯ ಇರುವೈಲು ಗ್ರಾಮದ ಗ್ರಾಮಸ್ಥರಾದ ರಾಜೇಶ್ ಪೂಜಾರಿ ಕಾಳೂರು ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.
ಮೂಡುಬಿದಿರೆಯ ಇರುವೈಲಿನ ಕುಗ್ರಾಮವಾದ ಕಾಳೂರು ಎಂಬಲ್ಲಿ ದೇಜು ಪೂಜಾರಿ ಮತ್ತು ಕಮಲ ದಂಪತಿಯ 5 ಜನ ಮಕ್ಕಳಲ್ಲಿ ಕೊನೆಯವರು ರಾಜೇಶ್ ಪೂಜಾರಿ. ಇವರು ಕೃಷಿಯ ಮೇಲೆ ಅಪಾರ ಕಾಳಜಿ, ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಹೈನುಗಾರಿಕೆ, ಭತ್ತ, ಅಡಿಕೆ, ಬಾಳೆ ಹೀಗೆ ಮಿಶ್ರ ಕೃಷಿಗಳನ್ನು ಬೆಳೆಸಿ, ಲಾಭವನ್ನು ಪಡೆಯುತ್ತಿದ್ದಾರೆ.
ಬಾಳೆ ತಳಿಗಳಲ್ಲಿ ಕದಲಿ, ಮೈಸೂರು, ಬೂದಿ, ಕ್ಯಾಂಡಿಸ್ ಹಾಗೂ ಗಾಳಿ ಬಾಳೆಗಿಡಗಳನ್ನು ಬೆಳೆಸುತ್ತಾರೆ. ಹಾಗೂ ಅಡಿಕೆಯನ್ನು ಬೆಳೆದು ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ತಮ್ಮ ಸಹೋದರರೆಲ್ಲ ಮುಂಬಯಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಇವರನ್ನು ಬರ ಹೇಳಿದಾಗ ಅವರು ಹೋಗಲು ಒಪ್ಪದೇ ಕೃಷಿಯನ್ನೇ ತಮ್ಮ ಕಾಯಕವನ್ನಾಗಿಸಿಕೊಂಡರು. ಜೊತೆಗೆ ಹಸುಗಳ ಪಾಲನೆ ಪೋಷಣೆ, ಹೈನುಗಾರಿಕೆಯ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ ಮಿಶ್ರ ಕೃಷಿಯಿಂದ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಹಿರಿಯರಿಂದ ಬಂದ ಕೃಷಿ ಸಂಪತ್ತಿಂದ ಉತ್ತಮ ಲಾಭವನ್ನು ಪಡೆದು ಎಲ್ಲಾ ಕೃಷಿಕರಿಗೂ ಮಾದರಿಯಾಗಿದ್ದಾರೆ.
PublicNext
20/05/2022 07:48 am