ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಹಲಸಿನ ತಳಿ ಸಂರಕ್ಷಣೆಯ ಸರದಾರ ದಕ್ಷಿಣ ಕನ್ನಡ ಜಿಲ್ಲೆಯ ಜಾಕ್ ಅನಿಲ್

ಪುತ್ತೂರು: ಕೃಷಿ ತೋಟದಲ್ಲಿ ಹಣ್ಣಾಗಿ ಕೊಳೆತು ನಾರುತ್ತಿದ್ದ ಹಲಸಿಗೆ ಇದೀಗ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಯಾರಿಗೂ ಬೇಡವಾಗಿದ್ದ ಹಲಸಿನಿಂದ ಇಂದು ವಿವಿಧ ಬಗೆಯ ಆಹಾರ ಪದಾರ್ಥಗಳು ಸಿದ್ಧಗೊಳ್ಳುತ್ತಿದ್ದು, ದೇಶೀಯ ಹಾಗೂ ವಿದೇಶೀ ಮಾರುಕಟ್ಟೆಗೂ ಈ ಪದಾರ್ಥಗಳು ಲಗ್ಗೆಯಿಟ್ಟಿದೆ. ಹಲಸಿನಿಂದ ಹಲವು ಬಗೆಯ ತಿಂಡಿ, ತಿನಿಸುಗಳನ್ನು ಮಾಡಲು ಅದೇ ತಳಿಯ ಹಲಸಿನ ಹಣ್ಣಿನ ಅವಶ್ಯತೆಯೂ ಇದೆ. ಈ ಅವಶ್ಯಕತೆಯನ್ನು ಪೂರೈಸಲೆಂದೇ ನಿಶಿಸಿ ಹೋಗುತ್ತಿದ್ದ ನೂರಾರು ತಳಿಯ ಹಲಸಿನ ಗಿಡಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿದ ಹಲಸು ಪ್ರೇಮಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ.

ಹಲಸಿನ ಹಲವು ಉತ್ಪನ್ನಗಳನ್ನು ತಯಾರಿಸಲು ಕೆಲವು ತಳಿಯ ಹಲಸಿನ ಹಣ್ಣಿನ ಅಗತ್ಯವೂ ಇದ್ದು, ಈ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಕಳೆದ 20 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಅಳಕೆಮಜಲಿನ ಹಲಸು ಪ್ರೇಮಿ ಅನಿಲ್ ಮಾಡುತ್ತಿದ್ದಾರೆ.

ಜ್ಯಾಕ್ ಅನಿಲ್ ಎಂದೇ ಪ್ರಖ್ಯಾತರಾಗಿರುವ ಇವರು ಅಳಿದು ಹೋಗುವ ಹಂತದಲ್ಲಿದ್ದ ನೂರಾರು ತಳಿಯ ಹಲಸಿನ ಸಸಿಗಳನ್ನು ಸಂರಕ್ಷಿಸಿ ಅವುಗಳನ್ನು ಮತ್ತೆ ಅಭಿವೃದ್ಧಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಜಾಕ್ ಅನಿಲ್ ನೂರಾರು ಸಂಖ್ಯೆಯ ಇಂಥಹ ಹಲಸಿನ ತಳಿಗಳನ್ನು ಸಂರಕ್ಷಿಸಿದ್ದಾರಲ್ಲದೆ, ಹಲಸಿನಲ್ಲಿ ವಿವಿಧ ತಳಿಯ ಗಿಡಗಳನ್ನೂ ಅಭಿವೃದ್ಧಿಪಡಿಸುವ ಮೂಲಕ ಹಲಸು ಬೆಳೆಗಾರರಿಗೆ ಉತ್ತಮ ಗುಣಮಟ್ಟದ ಹಲಸು ಗಿಡಗಳ ಜೊತೆಗೆ ಬೇಗನೇ ಫಲಕೊಡುವ ಗಿಡಗಳನ್ನೂ ಕಸಿ ಮಾಡಿ ಕೊಟ್ಟಿದ್ದಾರೆ.

ಸ್ವೀಟ್ ಹಲಸಿನ ಹಣ್ಣು, ಮೇಣವಿಲ್ಲದ ಹಲಸಿನ ಹಣ್ಣು, ಆಲ್ ಸೀಸನಲ್ ಹಲಸಿನ ಹಣ್ಣು ಹೀಗೆ ನೂರಕ್ಕೂ ಮಿಕ್ಕಿದ ಜಾತಿಯ ಹಲಸಿನ ಹಣ್ಣುಗಳ ಕಲೆಕ್ಷನ್ ಇವರ ಬಳಿಯಿದ್ದು, ಹಲಸಿನ ಗಿಡ ಬೇಕಾದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಹಲಸಿನ ಗಿಡಗಳ ವಿವಿಧ ಜಾತಿಗಳನ್ನು ಬೆಳೆಸುವ ಪ್ರಯತ್ನ ನಡೆಸಿದ್ದಾರೆ.

ಇವರು ಅಭಿವೃದ್ಧಿಪಡಿಸಿದ ವರ್ಷಪೂರ್ತಿ ಹಣ್ಣು ಕೊಡುವ ಹಲಸಿನ ಗಿಡಗಳಿಗೆ ಭಾರೀ ಬೇಡಿಕೆಯಿದ್ದು, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸುಮಾರು 50 ಸಾವಿರಕ್ಕೂ ಮಿಕ್ಕಿದ ಗಿಡಗಳನ್ನು ಮಾರಾಟ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಎಲ್ಲಾ ವ್ಯವಹಾರಗಳೂ ಲಾಸ್ ಆಗಿದ್ದ ಸಂದರ್ಭದಲ್ಲಿ ಜ್ಯಾಕ್ ಅನಿಲ್ ಅವರ ಹಲಸು ಗಿಡಗಳಿಗೆ ಮಾತ್ರ ಉತ್ತಮ ಬೇಡಿಕೆ ದೊರೆಯಲು ಹೆಚ್ಚಿನ ಜನ ಕೃಷಿಯತ್ತ ವಲಸೆ ಬಂದಿರುವುದೂ ಕಾರಣವಾಗಿದೆ.

Edited By : Manjunath H D
PublicNext

PublicNext

05/04/2022 10:42 am

Cinque Terre

44.69 K

Cinque Terre

2

ಸಂಬಂಧಿತ ಸುದ್ದಿ