ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತಾರಸಿ ತೋಟದಲ್ಲಿ ಯಶಸ್ವಿಗಳಿಸಿದ ಮಂಗಳೂರಿನ ಡಿಸೋಜಾ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಅನುಶ್ ಕೊಟ್ಟಾರಿ

ಮಂಗಳೂರು: ಇವರು ಹೆಸರು ಬ್ಲಾನಿ ಡಿಸೋಜಾ. ಮುಂಚೆ ಗಲ್ಫ್ ರಾಷ್ಟ್ರದಲ್ಲಿ ಇನ್‌ಕಂ ಅಡಿಟರ್ ಆಗಿ‌ ಕೆಲಸ ಮಾಡ್ತಿದ್ದ ಇವರು ಇದೀಗ ಯಶಸ್ವಿ ಕೃಷಿಕ..! ಕಳೆದ 20 ವರ್ಷಗಳ ಹಿಂದೆ ಡಿಸೋಜಾರು ಮಂಗಳೂರಲ್ಲಿರುವ ತಮ್ಮ‌ ಮನೆಗೆ ಬಂದರು. ಕೃಷಿ ಇವರ ಆಸಕ್ತಿ. ಹೀಗಾಗಿ ಇವರು ತಾರಸಿ ತೋಟ ಮಾಡುವ ನಿರ್ಧಾರ ಮಾಡಿ ಕೃಷಿಯತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ಧರಿಸಿದರು. ಹೀಗಾಗಿ ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿರುವ ತಮ್ಮ ಮನೆಯಲ್ಲಿ ತಾರಸಿ ತೋಟ ಬೆಳೆಯಲು ನಿರ್ಧರಿಸಿದರು. 1200 ಚದರ ಅಡಿ ಮಹಡಿಯಲ್ಲಿ 200ಕ್ಕೂ ಅಧಿಕ ವಿಧದ ತರಕಾರಿ, ಅಪರೂಪದ ಹಣ್ಣು ಹಂಪಲುಗಳನ್ನು ಬೆಳೆಯುತ್ತಿದ್ದಾರೆ. ತರಕಾರಿ ಜೊತೆಗೆ ಹಣ್ಣುಹಂಪಲುಗಳನ್ನು ಇವರ ತಾರಸಿ ತೋಟದಲ್ಲಿ ಬೆಳೆಯಲಾಗುತ್ತದೆ.

ಇವರ ತಾರಸಿ ತೋಟಕ್ಕೆ ವಿದ್ಯಾರ್ಥಿಗಳು, ಮಕ್ಕಳು ಕೃಷಿ ಬಗ್ಗೆ ಕಲಿಯಲು ಬರುತ್ತಿದ್ದಾರೆ. ಹಲಸಿನ ಹಣ್ಣು, ದ್ರಾಕ್ಷಿ, ಮಾವಿನಹಣ್ಣು, ಜಾಕ್ ಫ್ರೂಟ್ಸ್ ಹೀಗೆ ಮುಂತಾದ ಫ್ರೂಟ್ಸ್ ಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ತೊಂಡೆಕಾಯಿ ಬೆಳೆದು ಸಾವಿರಾರು ರೂಪಾಯಿ ಗಳಿಸುತ್ತಿದ್ದಾರೆ. ದೇಶ - ವಿದೇಶದ ಎಲ್ಲಾ ರೀತಿಯ ಹಣ್ಣುಹಂಪಲುಗಳನ್ನು ಇವರು ಬೆಳೆಯುತ್ತಿದ್ದಾರೆ. ಇವರಿಗೆ ಈಗ ಮಾರ್ಕೆಟ್ ಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಬೇಕಾದ್ದನ್ನು ಬೆಳೆದು ಸುಖ ಜೀವನ ನಡೆಸುತ್ತಿದ್ದಾರೆ. ಇದೇ ರೀತಿ ಎಲ್ಲರೂ ಪ್ರಯತ್ನ ಮಾಡಿದ್ರೆ ಇಡೀ‌ ಊರಿಗೆ ಊರೇ ಚಂದ ಕಾಣುತ್ತದೆ ಅಂತಾರೆ ಬ್ಲಾನಿ ಡಿಸೋಜಾ. ನೀವು ಇವರ ತಾರಸಿ ತೋಟವನ್ನು ನೋಡಬೇಕಂದ್ರೆ ಒಮ್ಮೆ ಮಾರ್ನಮಿಕಟ್ಟೆಯ ಇವರ ತಾರಸಿ ತೋಟಕ್ಕೆ ಭೇಟಿ ನೀಡಿ..

Edited By : Manjunath H D
Kshetra Samachara

Kshetra Samachara

30/11/2020 02:53 pm

Cinque Terre

33.54 K

Cinque Terre

3