ಕಾಪು: ಉಡುಪಿ ಜಿಲ್ಲೆಯ ಕಾಪು ಬೀಚ್ ಸಮುದ್ರದಲ್ಲಿ ಮುಳುಗುತ್ತಿದ್ದ ನಾಲ್ವರನ್ನು ಬೀಚ್ ಸುರಕ್ಷಾ ಸಿಬ್ಬಂದಿ ರಕ್ಷಿಸಿದ್ದಾರೆ.
ಸ್ಥಳೀಯರಾದ ಪ್ರಶಾಂತ್ ಕರ್ಕೇರ ಮತ್ತವರ ತಂಡ ಈ ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರ ಜೀವ ಉಳಿಸಿದೆ. ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ಎಂಬವರು ಬೀಚ್ ಗೆ ಬಂದಿದ್ದರು. ಸ್ಥಳೀಯರ ವಿರೋಧದ ನಡುವೆಯೂ ಸಮುದ್ರಕ್ಕೆ ಇಳಿದಿದ್ದರು. ನೀರಾಟವಾಡುತ್ತಿದ್ದ ಅವರು ಬಳಿಕ ಮುಳುಗುತ್ತಿದ್ದುದನ್ನು ಕಂಡ ಪ್ರಶಾಂತ್ ಕರ್ಕೇರ, ಪ್ರಥಮ್, ಪ್ರಶಾಂತ್, ಪ್ರದೀಪ್, ಜಾಕ್ಸನ್ ಅವರು ಅಬ್ಬರದ ಸಮುದ್ರಕ್ಕೆ ಧುಮುಕಿ ನಾಲ್ವರನ್ನು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
Kshetra Samachara
02/01/2021 06:46 pm