ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : 60ನೇ ವಾರ ನಿರಂತರ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಯುವಕರಿಗೆ ಸ್ಪೂರ್ತಿಯಾದ ತಂಡ !

ವರದಿ : ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

ಉಡುಪಿ : ಪಂಚವರ್ಣ ಯುವಕ ಮಂಡಲ (ರಿ) ಕೋಟ ಇವರ ವತಿಯಿಂದ ಸಮಾಜಮುಖಿ ,ಪರಿಸರ ಸ್ನೇಹಿ ಕಾರ್ಯಕ್ರಮದ ಸಲುವಾಯ ಕಳೆದ 59 ಭಾನುವಾರ ನಿರಂತರ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕೋಟ ಮತ್ತು ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಗಳಲ್ಲಿ ಗಿಡ ನಡುವ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದೆ.

ಪ್ರತಿ ವರ್ಷ ನವೆಂಬರ್ ೧ರಂದು ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು ಈ ಸಂಸ್ಥೆಗೆ ಇದೀಗ 23ರ ಹರೆಯ ತನ್ನ ಊರ ಸ್ಥಳೀಯ ಸಾಧಕರನ್ನು ಸತತ 14ವರ್ಷ ಗುರುತಿಸಿಕೊಂಡು ಬಂದು ತದನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಧಕರಾದ ಅಂತರಾಷ್ಟ್ರೀಯ ಕಬ್ಬಡಿಪಟು ರಿಶಾಂಕ್ ದೇವಾಡಿಗ,ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್,ರಂಗಕಲಾವಿದೆ ಉಮಾಶ್ರೀ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಿತ್ರನಟ ಮುಖ್ಯಮಂತ್ರಿ ಚಂದ್ರು, ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ,ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಗುರುತಿಸಿ ತನ್ನ ಸಂಸ್ಥೆಯ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ.ಇದೀಗ ಈ ಬಾರಿ ಯಕ್ಷರಂಗದ ಗುರು ಎಚ್ ಶ್ರೀಧರ ಹಂದೆ ಯವರಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ನೀಡಲಿದ್ದು ಅದು ಅಲ್ಲದೆ ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ,ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ವಿದ್ಯಾರ್ಥಿ ವೇತನ ಹೀಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ.

ಇಷ್ಟಕ್ಕೆ ಸಮಿತಗೊಳ್ಳಬಾರದೆಂಬ ಉದ್ದೇಶದಿಂದ ಪ್ರತಿ ಭಾನುವಾರ ಪರಿಸರ ಸ್ವಚ್ಛತೆ,ಗಿಡ ನಡುವ ಕಾರ್ಯಕ್ರಮ ಹೀಗೆ ನಿರಂತರವಾಗಿ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ.

೧.ನಮ್ಮೂರ ಕೆರೆ ಸ್ವಚ್ಛ ತಾ ಕಾರ್ಯ

೨.ಆಧಾರಮೇಳ

೩.ರೈತರೆಡೆ ನಮ್ಮ ನಡೆ ಸರಣಿ‌ಕಾರ್ಯಕ್ರಮ

೪.ಕೊರೋನಾ ವಾರಿಯರ್ಸ್ ಗೌರವಿಸುವ ಕಾರ್ಯ

೫.ಲಾಕ್ ಡೌನ್ ಸಂದರ್ಭದಲ್ಲಿ ಕಿಟ್ ವಿತರಣೆ

೬.ಪ್ಲಾಸ್ಟಿಕ್ ಮುಕ್ತ ಜಾತ್ರೆ (3ದೇವಳ ಅಮೃತೇಶ್ವರಿ,ಸಾಲಿಗ್ರಾಮ ಗುರುನರಸಿಂಹ, ಹಿರೇಮಹಾಲಿಙಗೇಶ್ವ,)

೭.ಬೀಚ್ ಕ್ಲಿನಿಂಗ್ ಕೋಟ ಪಡುಕರೆ

ಇನ್ನೂ ಹತ್ತು ಹಲವು ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವಕರಿಗೆ ಸ್ಪೂರ್ತಿಯಾಗಿ ಇನ್ನಷ್ಟು ಯುವಕ ಮಂಡಲಗಳು ಇವರ ದಾರಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಚಾರ.

Edited By : Nagesh Gaonkar
Kshetra Samachara

Kshetra Samachara

28/10/2020 04:13 pm

Cinque Terre

22.2 K

Cinque Terre

4