ಉಡುಪಿ: ನವರಾತ್ರಿ ಸೇರಿದಂತೆ ಹಬ್ಬಗಳು ಮುಗಿಯುತ್ತಿದ್ದಂತೆಯೇ ಕಳೆದ ಮೂರು ವಾರಗಳಿಂದ ಗಗನಮುಖಿಯಾಗಿದ್ದ ಉಡುಪಿ ಮಲ್ಲಿಗೆ ದರ ದಿಢೀರ್ ಕುಸಿತ ಕಂಡಿದೆ.
ಕಳೆದ ಎರಡು- ಮೂರು ವಾರಗಳಿಂದ ಮಲ್ಲಿಗೆ ಗರಿಷ್ಠ 1250 ಕ್ಕೆ ಏರಿತ್ತು. ಮುಖ್ಯವಾಗಿ ಪ್ರಸಿದ್ಧ ಶಂಕರಪುರ ಮಲ್ಲಿಗೆ ಮತ್ತು ಜಾಜಿ ಮಲ್ಲಿಗೆ ಜನಸಾಮಾನ್ಯರ ಕೈಗೆ ಎಟಕುತ್ತಿರಲಿಲ್ಲ. ಆದರೆ, ನವರಾತ್ರಿ ಮುಗಿಯುತ್ತಿದ್ದಂತೆ ಅಟ್ಟೆಗೆ 420 ರೂ. ಗೆ ಕುಸಿತ ಕಂಡಿದೆ.
ಜಾಜಿ ಮಲ್ಲಿಗೆ ದರ 220 ರೂ. ಕನಿಷ್ಠ ಬೆಲೆಗೆ ಕುಸಿದಿದೆ. ಈ ತಿಂಗಳ ಪ್ರಾರಂಭದಲ್ಲಿ 1050 ರಿಂದ ಮಲ್ಲಿಗೆ ದರ 1250 ರೂ. ತನಕ ಏರಿತ್ತು. ಸತತ 20 ದಿನಗಳ ಕಾಲ 1250 ರೂ.ಗಳಲ್ಲಿ ಮಲ್ಲಿಗೆ ವ್ಯಾಪಾರ ಆಗುತ್ತಿತ್ತು. ಆದರೆ ಹಬ್ಬಗಳು ಮುಗಿಯುವುದರೊಂದಿಗೇ ಮಲ್ಲಿಗೆ ದರ ಕನಿಷ್ಠ ಪ್ರಮಾಣಕ್ಕೆ ಕುಸಿದಿದ್ದು, ಬೇಡಿಕೆಯೂ ಕಡಿಮೆಯಾಗಿದೆ.
Kshetra Samachara
27/10/2020 09:17 pm