ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಆ ಕರಾಳ ದಿನಗಳಲ್ಲಿ "ನಮ್ಮ ನಡೆ...ಕೃಷಿ ಕಡೆ" ಧ್ಯೇಯಕ್ಕೆ ಭರ್ಜರಿ ಯಶಸ್ಸು: ನಿರಾಳತೆ ಭಾವದಲ್ಲಿ ಪಂಜದ ಯುವ ಪಡೆ

ಮುಲ್ಕಿ: ಕೊರೊನಾ ಲಾಕ್ ಡೌನ್ ನ ಆ ಕರಾಳ ದಿನಗಳಲ್ಲಿ ಪಕ್ಷಿಕೆರೆ ಸಮಿಪದ ಪಂಜ ಶ್ರೀಹರಿ ಸ್ಪೋರ್ಟ್ಸ್ ಕ್ಲಬ್ ನ ಯುವ ಪಡೆ "ನಮ್ಮ ನಡೆ... ಕೃಷಿ ಕಡೆ" ಮೂಲಕ ಭತ್ತದ ಬೇಸಾಯ ನಡೆಸಿದ್ದು, ಈ ಬಾರಿ ಭಾರಿ ಮಳೆ ನಡುವೆಯೂ ಫಲವತ್ತಾದ ಬೆಳೆ ಬಂದಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಅನೇಕ ಉದ್ಯೋಗಿಗಳು ಸಂಕಷ್ಟಕ್ಕೀಡಾಗಿದ್ದು, ಮುಂಬೈ ಸಹಿತ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದ ಯುವಕರು ಊರಿಗೆ ಬಂದು ಕೃಷಿಯತ್ತ ಒಲವು ತೋರಿಸಿದ್ದರು.

ಕೃಷಿಯಿಂದ ದೂರ ಸರಿಯುತ್ತಿರುವ ಯುವಜನಾಂಗವನ್ನು ಕೊರೊನಾ ಕೃಷಿಯತ್ತ ಚಿತ್ತ ಹರಿಸುವಂತೆ ಮಾಡಿದ್ದು ಲಾಕ್ ಡೌನ್ ದಿನಗಳಲ್ಲಿ ದುಡಿಮೆಗೆ ದಾರಿ ಮಾಡಿಕೊಟ್ಟು ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರವಾಗಿಸಿತ್ತು.

ಆ ದಿನಗಳಲ್ಲಿ ಪಂಜ ಶ್ರೀಹರಿ ಸ್ಪೋರ್ಟ್ಸ್ ಕ್ಲಬ್ ನ ಸುಮಾರು 60 ಸದಸ್ಯರ ಯುವಪಡೆ ಸುಮಾರು ಒಂದು ಎಕರೆಗೂ ಮಿಕ್ಕಿ ಹಡೀಲು ಗದ್ದೆಯಲ್ಲಿ ಬೇಸಾಯ ಆರಂಭಿಸಿದ್ದು ಉತ್ತಮ ಫಸಲು ಪಡೆಯುವ ಮೂಲಕ ಕೃಷಿ ಮಾಡಿದ್ದಕ್ಕೆ ಸಾರ್ಥಕವೆನಿಸಿದೆ.

ಕ್ಲಬ್ ಗೌರವಾಧ್ಯಕ್ಷ ರಾಮದಾಸ್ ಶೆಟ್ಟಿ ಮಾತನಾಡಿ, ಕೊರೊನಾ ನಡುವೆಯೂ ಯುವಕರ "ನಮ್ಮ ನಡೆ... ಕೃಷಿ ಕಡೆ" ಕಾರ್ಯವೈಖರಿ ಶ್ಲಾಘನೀಯವಾಗಿದ್ದು, ಪಬ್ಲಿಕ್ ನೆಕ್ಸ್ಟ್ ಸಹಿತ ಅನೇಕ ಮಾಧ್ಯಮಗಳ ಪ್ರೋತ್ಸಾಹ, ಹಿರಿಯರ ಮಾರ್ಗದರ್ಶನ, ಯುವಕರ ಪರಿಶ್ರಮದಿಂದ ಉತ್ತಮ ಫಸಲು ಬಂದಿದೆ ಎಂದರು.

ಕ್ಲಬ್ ಪದಾಧಿಕಾರಿ ದಿನೇಶ್ ಹರಿಪಾದೆ ಮಾತನಾಡಿ, ಪಕ್ಷಿಕೆರೆ ಶ್ರೀಹರಿ ಸ್ಪೋರ್ಟ್ಸ್ ಕ್ಲಬ್ ಯುವಕರ ತಂಡ ಸ್ವಚ್ಛತೆ ಬಗ್ಗೆಯೂ ಜಾಗೃತಿ ಮೂಡಿಸುವುದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯ ಹಮ್ಮಿಕೊಂಡಿದೆ ಎಂದರು.

Edited By :
Kshetra Samachara

Kshetra Samachara

20/10/2020 09:12 pm

Cinque Terre

24.65 K

Cinque Terre

2