ಹುಬ್ಬಳ್ಳಿ: ಆತ ಒಡಹುಟ್ಟದೇ ಇದ್ದರೂ ಕೂಡ ಮುಖ್ಯಮಂತ್ರಿಯವರ ಸಹೋದರ. ತಾಯಿ ಗಂಗಮ್ಮ ಬೊಮ್ಮಾಯಿಯವರ ನೆಚ್ಚಿನ ಮಗ. ಸಹೋದರ, ಸ್ನೇಹಿತ ಬಸವರಾಜ ಬೊಮ್ಮಾಯಿಯವರ ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೆಜ್ಜೆ ಹಾಕಿದ ಬೊಮ್ಮಾಯಿಯವರ ಆಪ್ತಮಿತ್ರ. ಹಾಗಿದ್ದರೇ ಯಾರು ವ್ಯಕ್ತಿ..? ಮುಖ್ಯಮಂತ್ರಿ ಬೊಮ್ಮಾಯಿಯವರ ನಂಟಿನ ಬಗ್ಗೆ ಬಿಚ್ಚಿಡುತ್ತೇವೆ ನೋಡಿ ಇಲ್ಲೊಂದು ನೆನಪಿನ ಗಂಟು...
ಹೀಗೆ... ಎಸ್.ಆರ್.ಬೊಮ್ಮಾಯಿ ಹಾಗೂ ಗಂಗಮ್ಮ ಬೊಮ್ಮಾಯಿಯವರ ಪೋಟೋಗಳಿಗೆ ಪೂಜೆ ಸಲ್ಲಿಸುತ್ತಿರುವ ಇವರು ಮಂಜುನಾಥ ಉಡುಪಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆಗೆ ಗರ್ಭ ಹಂಚಿಕೊಂಡು ಹುಟ್ಟಿಲ್ಲವಾದರೂ. ತಾಯಿ ಗಂಗಮ್ಮ ಬೊಮ್ಮಾಯಿಯವರ ನೆಚ್ಚಿನ ಮಗ ಮಂಜುನಾಥ ಉಡುಪಿ, ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್.ಬೊಮ್ಮಾಯಿಯವರ ಕಾಲದಿಂದಲೂ ಮನೆ, ಮನದಲ್ಲಿ ಸ್ಥಾನಗಳಿಸಿದ ಮಂಜುನಾಥ ಅವರು, ತಮ್ಮ ಬಾಂಧ್ಯವ್ಯದ ಬಗ್ಗೆ ಕೆಲವೊಂದು ಮಾತನ್ನು ಬಿಚ್ಚಿಟ್ಟಿದ್ದಾರೆ ನೋಡಿ...
ದಿ.ಎಸ್.ಆರ್.ಬೊಮ್ಮಾಯಿಯವರಂತೆ ಅವರ ಪುತ್ರ ಬಸವರಾಜ ಬೊಮ್ಮಾಯಿಯವರು ಕೂಡ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಅಲ್ಲದೇ ಮಂಜುನಾಥ ಉಡುಪಿಯವರ ಹಾಗೂ ಬೊಮ್ಮಾಯಿಯವರ ಸುಮಾರು 40 ವರ್ಷಕ್ಕೂ ಅಧಿಕ ಸ್ನೇಹ ಸಂಬಂಧ ಕುರಿತು ಹೇಳಿರುವ ಮಾತು ನಿಜಕ್ಕೂ ಅವರ ಬಾಂಧವ್ಯದ ಕ್ಷಣಗಳನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡುತ್ತದೆ ಹಾಗಿದ್ದರೇ ಕೇಳಿ ಬಿಡಿ ಬೊಮ್ಮಾಯಿಯವರ ನಂಟಿನ ಮಾತು...
ಇನ್ನೂ ತಾಯಿ ಗಂಗಮ್ಮ ಬೊಮ್ಮಾಯಿಯವರ ಸಿರಿಯನ್ನಿತ್ತೆಡೆ ಒಲ್ಲೆ ಎಂಬುವಂತ ಪುಸ್ತಕದಲ್ಲಿ ಮಂಜುನಾಥ ಉಡುಪಿಯವರ ಬಗ್ಗೆ ಮಂಜುನಾಥ ನನ್ನ ಮಾನಸಿಕ ಮಗ, ನನ್ನ ನೆಚ್ಚಿನ ಮಗ ಎಂದು ಭಾವನಾತ್ಮಕವಾಗಿ ಪುಸ್ತಕದಲ್ಲಿ ಉಲ್ಲೇಖಿಸಿರುವುದು ನಿಜಕ್ಕೂ ತಾಯಿ ಮತ್ತು ಮಗನ ಬಾಂಧವ್ಯವನ್ನು ಪರಿಚಯಿಸುತ್ತದೆ. ಹಾಗಿದ್ದರೇ ಈ ಬಾಂಧವ್ಯದ ಬಗ್ಗೆ ಮಂಜುನಾಥ ಏನ ಹೇಳ್ತಾರೆ ಕೇಳಿ..
ಒಟ್ಟಿನಲ್ಲಿ ಮಂಜುನಾಥ ಉಡುಪಿಯವರು, ಬಸವರಾಜ ಬೊಮ್ಮಾಯಿಯವರೊಂದಿಗೆ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರೊಂದಿಗೆ ಬೆಳೆದು ಮನೆಯ ಮಗನಂತೆ, ಸ್ನೇಹಿತನಂತೆ ಜೊತೆಗಾರನಾಗಿ ಬೆಳೆದಿರುವುದು ನಿಜಕ್ಕೂ ವಿಶೇಷವಾಗಿದೆ.
Kshetra Samachara
31/07/2021 05:53 pm