ಕೂಡ್ಲು ತೀರ್ಥ ಜಲಪಾತ ಹೆಬ್ರಿಯಿ0ದ 20 ಕಿ.ಮೀ. ದೂರದಲ್ಲಿದೆ. ಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ಸೀತಾ ನದಿಯ ಉಗಮ ಸ್ಥಳವಾಗಿದ್ದು, ರಸ್ತೆ ಸ0ಪರ್ಕದಿ0ದ 4 ಕಿ.ಮೀ. ದೂರದಲ್ಲಿದೆ. 4 ಕಿ.ಮೀ. ಚಾರಣದ ನಂತರ ರಮ್ಯ ಮನೋಹರ ಜಲಪಾತವು ಎದುರುಗೊಳ್ಳುವುದು. ಚಾರಣದ ಮಧ್ಯ ಹಚ್ಚ ಹಸುರಿನ ಪರಿಸರವೂ ಮನಸ್ಸಿಗೆ ಮುದ ನೀಡುವುದು.
ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತಿ ಪಡೆದಿರುವ ಆಗುಂಬೆಯ ದಟ್ಟ ಕಾನನದ ಕಾಲುದಾರಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಇರುವ ಕೂಡ್ಲು ತೀರ್ಥವು ಬಸವಳಿದು ಅರಸಿ ಬಂದ ಮನಕೆ ಚೆಲುವಿನಿಂದ ಮನಸೂರೆಗೊಳ್ಳುವಂತೆ ಮಾಡಿಬಿಡುತ್ತದೆ.
Kshetra Samachara
12/02/2021 06:55 pm