ಕುಂದಾಪುರ: ರೋಯಲ್ ಕ್ಲಬ್ ಕುಂದಾಪುರ ಹಾಗೂ ಸೀನಿಯರ್ ಚೇಂಬರ್ ಕುಂದಾಪುರ ಜೇಸಿಐ ಕುಂದಾಪುರ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನೇರವೇರಿತು. ಜಗದೀಶ್ ಕೆ. ಇವರು 59ನೇ ಬಾರಿ ರಕ್ತದಾನ ಮಾಡುವುದರ ಮೂಲಕ ಉದ್ಘಾಟಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಜೇಸಿಐ ಸೀನಿಯರ್ ಪದಾಧಿಕಾರಿಗಳು ಹಾಗೂ ರೋಯಲ್ ಕ್ಲಬ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 50 ಯುನಿಟ್ ರಕ್ತವನ್ನು ಶೇಖರಿಸಿ ರೆಡ್ಕ್ರಾಸ್ ಸಂಸ್ಥೆಗೆ ನೀಡಲಾಯಿತು.
Kshetra Samachara
16/08/2022 03:33 pm