ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೇರಳದಲ್ಲಿ ಮಂಕಿ ಪಾಕ್ಸ್ ಶಂಕಿತ ವ್ಯಕ್ತಿ ಪತ್ತೆ?; ವೆನ್ಲಾಕ್ ನಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ

ಮಂಗಳೂರು: ಕೇರಳದಲ್ಲಿ ವಿದೇಶದಿಂದ ಬಂದಿರುವ ಯುವಕನಲ್ಲಿ ಶಂಕಿತ ಮಂಕಿ ಪಾಕ್ಸ್ ಲಕ್ಷಣ ಕಂಡುಬರುತ್ತಿದ್ದಂತೆಯೇ ಎಚ್ಚೆತ್ತ ದ.ಕ.ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಕಿ ಪಾಕ್ಸ್ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿದೆ.

ವಿದೇಶದಿಂದ ಬಂದಿರುವ ಕೇರಳದ ಯುವಕನೋರ್ವನಿಗೆ ಮಂಕಿ ಪಾಕ್ಸ್ ಲಕ್ಷಣ ಕಂಡು ಬಂದಿದ್ದು, ಪೆರಿಯಾರಂ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದಾನೆ. ನೆರೆಯ ಕೇರಳದಲ್ಲಿ ಶಂಕಿತ ಮಂಕಿ ಪಾಕ್ಸ್ ಸೋಂಕಿತ ಕಂಡು ಬರುತ್ತಿದ್ದಂತೆಯೇ ಮುನ್ನೆಚ್ಚರಿಕೆ ದೃಷ್ಟಿಯಿಂದ ವೆನ್ಲಾಕ್ ನಲ್ಲಿ ಮಂಕಿ ಪಾಕ್ಸ್ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ಸಹಿತ 10 ಬೆಡ್ ಗಳನ್ನು ಮೀಸಲಿರಿಸಲಾಗಿದೆ‌. ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ. ಯಾರಲ್ಲಾದರೂ ಜ್ವರದ ಲಕ್ಷಣ ಕಂಡು ಬಂದಲ್ಲಿ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಲಾಗುತ್ತದೆ.

ಜಿಲ್ಲಾ ಆರ್ ಸಿಎಚ್ ಅಧಿಕಾರಿ‌ ಡಾ‌.ರಾಜೇಶ್ ಈ ಬಗ್ಗೆ ಮಾಹಿತಿ ನೀಡಿ, ಶಂಕಿತರ ಮಾದರಿಯನ್ನು ಸಂಗ್ರಹಿಸಿ ಪುಣೆಯ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಅಥವಾ ಬೆಂಗಳೂರಿನ ಎನ್ಐವಿಗೆ ಕಳುಹಿಸಲಾಗುತ್ತದೆ. ಆದರೆ, ಈವರೆಗೆ ಯಾರಲ್ಲೂ ಮಂಕಿ ಪಾಕ್ಸ್ ಗೆ ಸಂಬಂಧಿಸಿದ ಲಕ್ಷಣ ಗೋಚರವಾಗಿಲ್ಲ ಎಂದು ಹೇಳಿದರು.

Edited By :
PublicNext

PublicNext

18/07/2022 08:08 pm

Cinque Terre

45.25 K

Cinque Terre

0

ಸಂಬಂಧಿತ ಸುದ್ದಿ