ಉಡುಪಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮುಂಜಾನೆಯೇ ಯೋಗಾಸಕ್ತರು ಕೃಷ್ಣಮಠದತ್ತ ಆಗಮಿಸಿ ಉತ್ಸಾಹದಿಂದ ಯೋಗದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉದ್ಘಾಟಿಸಿದರು.ಆಯುಷ್ ಇಲಾಖೆ, ಜಿಲ್ಲಾಢಳಿತ, ಜಿಲ್ಲಾ ಪಂಚಾಯತ್, ಪರ್ಯಾಯ ಕೃಷ್ಣಾಪುರ ಮಠ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭಾಗವಹಿಸಿ ಯೋಗದಲ್ಲಿ ಪಾಲ್ಗೊಂಡರು.
Kshetra Samachara
21/06/2022 11:45 am