ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ; ಉಮಾನಾಥ್ ಶೆಟ್ಟಿಗಾರ್

ಮುಲ್ಕಿ: ಪಡುಪಣಂಬೂರು ಸಮೀಪದ ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಪಣಂಬೂರು ಕಾರ್ಯಕ್ಷೇತ್ರ ಹಾಗೂ ಪ್ರಾ. ಆ. ಕೇಂದ್ರ ಅತ್ತೂರು ಕೆಮ್ರಾಲ್ ಸಹಯೋಗದಲ್ಲಿ ಬಿಪಿ ,ಶುಗರ್ ಟೆಸ್ಟ್, ಕೋವಿಡ್ ಲಸಿಕೆಯ ಮೊದಲನೇ ಎರಡನೇ ಹಾಗೂ ಬೂಸ್ಟರ್ ಡೋಸ್ , ಈ ಶ್ರಮ್ ಕಾರ್ಡ, ಪಾನ್ ಕಾರ್ಡ, ಎನ್. ಪಿ.ಎಸ್. ಈ ಕೆ ವೈ ಸಿ ನೋಂದಾವಣೆ ಶಿಬಿರ ನಡೆಯಿತು

ಶಿಬಿರವನ್ನು ಉದ್ಘಾಟಿಸಿ ವೀರಭದ್ರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಉಮನಾಥ ಶೆಟ್ಟಿಗಾರ್ ಮಾತನಾಡಿ ಗ್ರಾಮಸ್ಥರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿದಿ ಸವಿತಾ ಶರತ್ ಬೆಳ್ಳಾಯರು, ಲೆಕ್ಕಪರಿಶೋದಕರಾದ ಶ್ವೇತ, ಸಿ ಎಸ್ ಸಿ ಕೇಂದ್ರದ ಆರತಿ, ಒಕ್ಕೂಟದ ಮಾಜಿ ಅದ್ಯಕ್ಷ ಕರುಣಾಕರ ಶೆಟ್ಟಿಗಾರ್, ಪ್ರಾ.ಆ. ಕೇಂದ್ರದ ಮಾರ್ಗರೇಟ್ ಸುದರ್ಶಿನಿ, ಆಶಾ ಕಾರ್ಯಕರ್ತೆ ಪುಷ್ಪ, ಆರೋಗ್ಯ ಅಧಿಕಾರಿ ಕೋಮಲ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/05/2022 07:06 pm

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ