ಉಡುಪಿ; ಶ್ರೀಕೃಷ್ಣಮಠಕ್ಕೆ ಬಂದಿರುವ ಯಾತ್ರಾರ್ಥಿಯೊಬ್ಬರು ಮಧ್ವ ಸರೋವರದ ಬಳಿ ಮೂರ್ಛೆ ಬಂದು ಬಿದ್ದಿದ್ದರು. ತಕ್ಷಣ ಇವರಿಗೆ ಆರೋಗ್ಯ ಕಾರ್ಯಕರ್ತರು ಪ್ರಥಮ ಚಿಕಿತ್ಸೆ ನೀಡಿ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಒಳಕಾಡು ಅವರು ರೋಗಿಯನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ರೋಗಿಯು ಕಾರ್ಕಳ ತಾಲೂಕಿನ ಕಬ್ಬಿನಾಲೆಯ ಸಂಪಿಗೆ ದರ್ಕಾಸಿನ ಜೀವನ್ ಪೂಜಾರಿ (53 ) ಎಂದು ತಿಳಿದುಬಂದಿದೆ. ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
Kshetra Samachara
01/03/2022 10:02 pm